ಬೆಂಗಳೂರು: ಇತ್ತೀಚೆಗೆ ಹೃದಯಾಘಾತಗಳು ಹೆಚ್ಚಾಗುತ್ತಿದ್ದು, ಯುವ ಪೀಳಿಗೆ ಬಲಿಯಾಗುತ್ತಿರುವುದಕ್ಕೆ ಆತಂಕ ವ್ಯಕ್ತವಾಗುತ್ತಿದೆ.
ಈಗ ಫಿಟ್ನೆಸ್ ತರಬೇತುದಾರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. 45 ವಯಸ್ಸಿನ ಸೈಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಅನೀಲ್ ಕಡ್ಸೂರ್ ಹೃದಯಾಘಾತಕ್ಕೆ ಬಲಿಯಾಗಿರುವ ವ್ಯಕ್ತಿ. ಅಸ್ವಸ್ಥರಾಗಿದ್ದ ಅನೀಲ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿ ಪ್ರತಿ ದಿನ 100 ಕಿ.ಮೀ ಸೈಕ್ಲಿಂಗ್ ಮಾಡುತ್ತಿದ್ದರು. 42 ತಿಂಗಳು ನಿರಂತರವಾಗಿ, ಸೆಂಚ್ಯೂರಿ ರೇಡ್ ಮಾಡಿ ಗಮನ ಸೆಳೆದಿದ್ದರು. ಹಲವಾರು ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದರು.