ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ಎಲ್ಲ ನದಿಗಳು ಬತ್ತಿ ಹೋಗಿದ್ದವು. ಹೀಗಾಗಿ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿತ್ತು.
ಆದರೆ, ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು (rivers) ಮೈದುಂಬಿ ಹರಿಯುತ್ತಿವೆ.
ಜಿಲ್ಲೆಯ 9 ಠಾಣಾ ವ್ಯಾಪ್ತಿಯ 16 ಸೇತುವೆಗಳು ಜಲಾವೃತವಾಗಿವೆ. ಬೆಳಗಾವಿಯಲ್ಲಿನ ದೂಧ್ ಗಂಗಾ, ವೇದಗಂಗಾ, ಸಂಗಮ ಸ್ಥಾನ ಕುನ್ನೂರು ಬಳಿಯ ಕುನ್ನೂರು-ಬಾರವಾಡ ಸೇತುವೆ ಜಲಾವೃತವಾಗಿದೆ. ಕುನ್ನೂರು ಬಾರವಾಡ ಬಳಿ ದೂಧ್ಗಂಗಾ ವೇದಗಂಗಾ ಸಂಗಮ ಕ್ಷೇತ್ರದ ಹತ್ತಿರ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.