ಗುಜರಾತ್: ನೆದರ್ ಲ್ಯಾಂಡ್ ನ ಫ್ಲೈಯಿಂಗ್ ಕಾರು ಉತ್ಪಾದಕ ಸಂಸ್ಥೆ ಪಿಎಎಲ್-ವಿ ಗುಜರಾತ್ ನಲ್ಲಿ ಉತ್ಪಾದನಾ ಘಟಕ ತೆರೆಯಲು ನಿರ್ಧರಿಸಿದೆ. ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಹಕಾರ ನೀಡಲು ಗುಜರಾತ್ ಸರ್ಕಾರ ಸಮ್ಮತಿಸಿದೆ ಎಂದು ಕಂಪನಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಎಎಲ್-ವಿ ಸಂಸ್ಥೆಯ ಅಂತಾರಾಷ್ಟ್ರೀಯ ಉದ್ಯಮ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಕಾರ್ಲೋ ಮಾಸ್ಬೊಮ್ಮೆಲ್, ನಮ್ಮ ಸಂಸ್ಥೆ ಫ್ಲೈಯಿಂಗ್ ಕಾರು ಉತ್ಪಾದನೆಗೆ ವಿಶ್ವಮಟ್ಟದ ಮೂಲಭೂತ ಸೌಕರ್ಯಗಳನ್ನು ಹೊಂದಿರೋ ಗುಜರಾತ್ ನ್ನು ಆಯ್ಕೆ ಮಾಡಿಕೊಂಡಿದೆ. ಗುಜರಾತ್ ಸರ್ಕಾರ ಸಂಸ್ಥೆಗೆ ಅಗತ್ಯವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡೋದಾಗಿ ಭರವಸೆ ನೀಡಿದೆ ಅಂತ ಹೇಳಿದ್ದಾರೆ.
ವಿಶೇಷತೆಗಳೇನು?
ಭಾರತದಲ್ಲಿ ತಯಾರಾಗಲಿರುವ ಈ ಫ್ಲೈಯಿಂಗ್ ಕಾರ್ ಎರಡು ಎಂಜಿನ್ ಹೊಂದಿರುತ್ತದೆ. ರಸ್ತೆಯಲ್ಲಿ 160 ಕಿ.ಮೀ ವೇಗದಲ್ಲಿ ಚಲಿಸಬಹುದು ಮತ್ತು 180 ಕಿ.ಮೀ ವೇಗದಲ್ಲಿ ಹಾರಬಲ್ಲದು. ಇದಲ್ಲದೆ, ಕಾರು ಮೂರು ನಿಮಿಷಗಳಲ್ಲಿ ಹಾರುವ ಕಾರಾಗಿ ಬದಲಾಗುತ್ತೆ. ಇನ್ನು ಪೂರ್ಣ ಟ್ಯಾಂಕ್ನಲ್ಲಿ 500 ಕಿ.ಮೀ ದೂರ ಪ್ರಯಾಣ ಮಾಡಬಹುದು.