flying electric car : ಮೇಡ್ ಇನ್ ಇಂಡಿಯಾ ಕಂಪನಿ ಪರಿಚಯಿಸುತ್ತಿದೆ ಫ್ಲೈಯಿಂಗ್ ಎಲೆಕ್ಟ್ರಿಕ್ಟ್ ಕಾರು…
ಕಳೆದ ಶತಮಾನದ ಆಟೋಮೋಟಿವ್ ಫೀಲ್ಡ್ ನಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಹೆಚ್ಚು ಹೊಸ ಮಾದರಿಯ ವಾಹನಗಳು ಗ್ರಾಹಕರ ಹೊಸ ಅನುಭವಕ್ಕೆ ಸಾಕ್ಷಿಯಾಗಲಿವೆ. ಇದೀಗ ಫ್ಲೈಯಿಂಗ್ ಕಾರುಗಳನ್ನ ಭವಿಷ್ಯದ ಫೀಚರ್ ಕಾರ್ ಗಳೆಂದು ಬಿಂಬಿಸಲಾಗುತ್ತಿದೆ.
ಭಾರತೀಯ ಕಂಪನಿಯಿಂದಲೂ ಹಾರುವ ಕಾರು
ದೆಹಲಿ ಮೂಲದ ASKA ಎಕ್ವಿಪ್‌ಮೆಂಟ್ ಲಿಮಿಟೆಡ್ ಕಂಪನಿಯು ತನ್ನ ಭವಿಷ್ಯದ ಪ್ಲಾನ್ ಅಲ್ಲಿ ಪ್ಲೈಯಿಂಗ್ ಕಾರು ನಿರ್ಮಾಣ ಮಾಡಲು ಮುಂದಾಗಿದೆ. ಹೊಸದಾಗಿ ಹಾರುವ ಎಲೆಕ್ಟ್ರಿಕ್ ಕಾರನ್ನ ತರಲು ಮುಂದಾಗಿದ್ದು, ವಿಪತ್ತು ನಿರ್ವಹಣೆಯಲ್ಲಿ ಬಳಸುವ ಸಾಧ್ಯತೆ ಇದೆ.
ಅಸ್ಕಾ ಕಂಪನಿಯು ಪ್ರಸ್ತುತ ಅಗ್ನಿಶಾಮಕ ರಕ್ಷಣಾ ಸಾಧನಗಳು, ಅಗ್ನಿ ಸುರಕ್ಷತಾ ಉಪಕರಣಗಳು, ವಿಪತ್ತು ನಿರ್ವಹಣಾ ಉಪಕರಣಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿದೆ.
ರಕ್ಷಣಾ ವಲಯದ ಅವಶ್ಯಕತೆಗೆ ಅನುಗುಣವಾಗಿ ಹಾರುವ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅಂತಿಮಗೊಳಿಸಲಾಗಿದೆ ಮತ್ತು ಹೊಸ ವಾಹನ ಮಾದರಿಯು ಮುಂದಿನ ಕೆಲವು ವರ್ಷಗಳಲ್ಲಿ ಅಧಿಕೃತವಾಗಿ ಸೇವೆಯನ್ನ ಪ್ರವೇಶಿಸಲಿದೆ.
ಈ ವಾಹನವು ಎಲೆಕ್ಟ್ರಿಕ್ ಕಾರ್ ಮತ್ತು ಕ್ವಾಡ್‌ಕಾಪ್ಟರ್ ಮಾದರಿಗಳಲ್ಲಿ ಕಾಣಿಸಿಕೊಂಡಿದೆ ಮತ್ತು 2023ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಜನವರಿ 5 ರಿಂದ ಜನವರಿ 8 ರವರೆಗೆ ಪ್ರದರ್ಶಿಸಲು ಸಿದ್ಧವಾಗಿದೆ.
ಹಾರುವ ಕಾರಿನ ಮೈಲೇಜ್ ಎಷ್ಟು?
ಹೊಸ ಪ್ಲೈಯಿಂಗ್ ಕಾರಿನಲ್ಲಿ, ದೊಡ್ಡ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿಸಲಾಗಿದೆ. ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 400 ಕಿಮೀ ಮೈಲೇಜ್ ನೀಡುತ್ತದೆ. ಇದಲ್ಲದೇ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವುದರಿಂದ ಕೇವಲ 30 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, ಇದು ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ಅಸ್ಕಾ ಫ್ಲೈಯಿಂಗ್ ಕಾರ್ ಕೇವಲ ಮೂರು ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನ ಪಡೆದುಕೊಳ್ಳುತ್ತದೆ ಮತ್ತು ಗರಿಷ್ಠ 200 ಕಿಮೀ ಸ್ಪೀಡ್ ನಲ್ಲಿ ಮುನ್ನುಗ್ಗಲಿದೆ.
flying electric car: Made in India company is introducing flying electric car…