ಹೋಳಿಗೆ
ಬೇಕಾದ ಪದಾರ್ಥಗಳು
ಹೊರಗಿನ ಪದರದ ಹಿಟ್ಟಿಗೆ
2 ಕಪ್ ಮೈದಾ
ಒಂದು ಪಿಂಚ್ ಅರಿಶಿನ ಪುಡಿ
ರುಚಿಗೆ ಉಪ್ಪು
ನೀರು
ಎಣ್ಣೆ
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ಮಾಡಿ. Saakshatv cooking recipes holige
ಸಿಹಿ ಹೂರಣ (ಸ್ಟಫಿಂಗ್)
1 ಕಪ್ / ಪಾವ್ ತೊಗರಿ ಬೇಳೆ
1 ಕಪ್ / ಪಾವ್ ಕಡ್ಲೆ ಬೇಳೆ
1 ಕಪ್ ಬೆಲ್ಲ
1/2 ಟೀಸ್ಪೂನ್ ಏಲಕ್ಕಿ ಪುಡಿ
ವಿಧಾನ
ಪ್ರೆಶರ್ ಕುಕ್ಕರ್ ನಲ್ಲಿ ತೊಗರಿ ಬೇಳೆ ಮತ್ತು ಕಡ್ಲೆ ಬೇಳೆಗಳನ್ನು 3 ಕಪ್ ನೀರನ್ನು ಸೇರಿಸಿ 3 ರಿಂದ 4 ಸೀಟಿ ಹೊಡೆಯಲು ಬಿಡಿ.
ದಾಲ್ ನಿಂದ ಎಲ್ಲಾ ನೀರನ್ನು ತೆಗೆದು, ತಣ್ಣಗಾಗುವ ವರೆಗೆ ಹಾಗೆ ಬಿಡಿ. ನಂತರ ಬೆಲ್ಲದ ಜೊತೆಗೆ ಬೇಯಿಸಿದ ದಾಲ್ ( ತೊಗರಿ ಬೇಳೆ ಮತ್ತು ಕಡ್ಲೆ ಬೇಳೆ) ಅನ್ನು ಚೆನ್ನಾಗಿ ರುಬ್ಬಿ. ¼ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಮಿಶ್ರಣವನ್ನು ಸೇರಿಸಿ. ನೀರಿನ ಅಂಶ ಹೋಗುವವರೆಗೆ ಮಿಶ್ರಣವನ್ನು ಬೇಯಿಸಿ.
ಬಳಿಕ ಅದರಿಂದ ಸಣ್ಣ ಚೆಂಡುಗಳನ್ನು ತಯಾರಿಸಿ ಇರಿಸಿಕೊಳ್ಳಿ .
ಒಂದು ಬಟ್ಟಲಿನಲ್ಲಿ ಮೈದಾ, ಉಪ್ಪು, ಅರಿಶಿನ ಮತ್ತು ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ 2 ಗಂಟೆಗಳ ಕಾಲ ಹಾಗೆ ಇರಿಸಿ.
ಅದರಿಂದ ಸಣ್ಣ ಚೆಂಡುಗಳನ್ನು ತೆಗೆದುಕೊಂಡು ಅದನ್ನು ಪೂರಿ ಗಾತ್ರಕ್ಕೆ ಚಪ್ಪಟೆ ಮಾಡಿ .. ಈಗ ಸಿಹಿಯಾದ ತೊಗರಿ ಬೇಳೆ ಮತ್ತು ಕಡ್ಲೆ ಬೇಳೆ ಚೆಂಡುಗಳನ್ನು ಮಧ್ಯದಲ್ಲಿ ಇರಿಸಿ ಮತ್ತು ಅಂಚುಗಳನ್ನು ಮಡಿಸಿ.
ಬಳಿಕ ದುಂಡಗಿನ ಆಕಾರದಲ್ಲಿ ತೆಳುವಾಗುವ ತನಕ ಲಟ್ಟಿಸಿ.
ನಂತರ ಅದನ್ನು ತವಾದಲ್ಲಿ ಹುರಿಯಿರಿ. ಹುರಿಯುವಾಗ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ . ಎರಡೂ ಬದಿಗಳನ್ನು ಸ್ವಲ್ಪ ಒತ್ತುವಂತೆ ಬೇಯಿಸಿ. ಈಗ ಬಿಸಿ ಬಿಸಿಯಾದ ಹೋಳಿಗೆ ರೆಡಿ.
ಬ್ರೆಡ್ ಗುಲಾಬ್ ಜಾಮೂನ್
ಪದಾರ್ಥಗಳು
1 ಕಪ್ ಸಕ್ಕರೆ
1/2 ಕಪ್ ನೀರು
1 1/2 ಟೀಸ್ಪೂನ್ ಏಲಕ್ಕಿ ಪುಡಿ
3 ಟೀಸ್ಪೂನ್ ನಟ್ಸ್( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ)
1 ಟೀಸ್ಪೂನ್ ಗುಲ್ಕಂಡ್ / ರೋಸ್ ಪೆಟಲ್ ಜಾಮ್
6 ಬ್ರೆಡ್ ಚೂರುಗಳು
ಒಂದು ಪಿಂಚ್ ಅಡಿಗೆ ಸೋಡಾ
ಅಗತ್ಯವಿರುವಷ್ಟು ಹಾಲು Saakshatv cooking recipes Gulabjamun
ಪ್ಯಾನ್ ಅನ್ನು ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ.ಸಕ್ಕರೆ ಮತ್ತು ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
ಸಕ್ಕರೆ ಕರಗಿದಾಗ ಮತ್ತು ಸಿರಪ್ ಕುದಿ ಬರಲು ಪ್ರಾರಂಭವಾದಾಗ ತಾಪಮಾನವನ್ನು ಕಡಿಮೆ ಮಾಡಿ.
ಸಿರಪ್ ಅನ್ನು 7-8 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕೆಳಗಿಳಿಸಿ.
ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಸಕ್ಕರೆ ಪಾಕ ರೆಡಿಯಾಗಿದೆ.
ಒಂದು ಪಾತ್ರೆಯಲ್ಲಿ ಗುಲ್ಕಂಡ್ (ಗುಲಾಬಿ ದಳಗಳ ಜಾಮ್) ತೆಗೆದುಕೊಳ್ಳಿ. ಅದಕ್ಕೆ ನಟ್ಸ್ ಗಳನ್ನು ( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ) ಸೇರಿಸಿ.
ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರ ಸಣ್ಣ ಉಂಡೆಗಳನ್ನಾಗಿ ಮಾಡಿ. ಇದನ್ನು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ.
ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ಈಗ ಬ್ರೆಡ್ ಅನ್ನು ಸಣ್ಣ ತುಂಡುಗಳನ್ನು ಮಾಡಿ ಪುಡಿ ಮಾಡಿ.
ಅಡಿಗೆ ಸೋಡಾ ಸೇರಿಸಿ. ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
ಬ್ರೆಡ್‌ನ ತಾಜಾತನಕ್ಕೆ ಅನುಗುಣವಾಗಿ ಹಾಲಿನ ಪ್ರಮಾಣವನ್ನು ಹೊಂದಿಸಿ. ಅರೆ ಮೃದುವಾದ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ.
ರೆಫ್ರಿಜರೇಟರ್ನಲ್ಲಿ ಇರಿಸಿದ ಮಿಶ್ರಣವನ್ನು ಬೆರೆಸಿಕೊಳ್ಳಿ. ಇದನ್ನು ಸಣ್ಣ ಚೆಂಡುಗಳನ್ನಾಗಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಗುಲಾಬ್ ಜಾಮೂನ್‌ಗಳನ್ನು ಕಡಿಮೆ ಶಾಖದಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಗುಲಾಬ್ ಜಾಮೂನ್‌ಗಳನ್ನು ಹುರಿದ ನಂತರ, ಅವುಗಳನ್ನು ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಬಿಡಿ. ಸಿರಪ್ ನಲ್ಲಿ 2-3 ಗಂಟೆಗಳ ಕಾಲ ಬಿಡಿ. ಈಗ ಸಕ್ಕರೆ ಪಾಕದ ಜೊತೆಗೆ ಬ್ರೆಡ್ ಗುಲಾಬ್ ಜಾಮೂನ್‌ಗಳನ್ನು ಸವಿಯಿರಿ.
ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್
ಬೇಕಾಗುವ ಸಾಮಗ್ರಿಗಳು
ಅಮುಲ್ ಹಾಲಿನಪುಡಿ – 3 ಕಪ್
ಕೊಕೊ ಪುಡಿ – 1 ಕಪ್
ಸಕ್ಕರೆ – 2 ಕಪ್
ಬೆಣ್ಣೆ – 1/2 ಕಪ್
ಅಗತ್ಯವಿರುವಷ್ಟು ಗೋಡಂಬಿ, ಪಿಸ್ತಾ ಚೂರುಗಳು Saakshatv cooking recipes chocolate
ಹಾಲಿನ ಪುಡಿ ಮತ್ತು ಕೊಕೊ ಪುಡಿಯನ್ನು ಚೆನ್ನಾಗಿ ಬೆರೆಸಿ ಅಥವಾ ಮಿಕ್ಸಿಯಲ್ಲಿ ಹಾಕಿ ಎರಡು ಪುಡಿಗಳನ್ನು ಚೆನ್ನಾಗಿ ಬೆರೆಸಿ.
ನಂತರ ದಪ್ಪವಾದ ಕೆಳಭಾಗದ ಪಾತ್ರೆಯಲ್ಲಿ ಅಥವಾ ಕಡಾಯಿಯಲ್ಲಿ ತೆಗೆದುಕೊಳ್ಳಿ.
ಅದನ್ನು ಬಿಸಿಮಾಡಿ. ನೀರು ಹಾಕಿ. ನೀರು ಬಿಸಿಯಾದಾಗ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ.
ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗಿ, ಮಿಶ್ರಣವು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಬೆಣ್ಣೆ ಸೇರಿಸಿ. ಜ್ವಾಲೆಯನ್ನು ಕಡಿಮೆ ಇರಿಸಿ.
ಬೆಣ್ಣೆ ಸಂಪೂರ್ಣವಾಗಿ ಕರಗಿಸಿದಾಗ ಅದಕ್ಕೆ ಕೊಕೊ ಹಾಲಿನ ಪುಡಿ ಮಿಶ್ರಣವನ್ನು ಸೇರಿಸಿ.
ಯಾವುದೇ ಉಂಡೆಗಳು ರೂಪುಗೊಳ್ಳದಂತೆ ಅದನ್ನು ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಅದನ್ನು ಕೆಳಗಿಳಿಸಿ.
ಬೇಕಿದ್ದರೆ ಹುರಿದ ಗೋಡಂಬಿ, ಪಿಸ್ತಾ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ.
ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಬೆಚ್ವಗಿರುವಾಗ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಚಾಕೊಲೇಟ್ ಚೆಂಡನ್ನು ತಯಾರಿಸಿ.
ಅಥವಾ ಒಂದು ಟ್ರೇ ಅನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಚಾಕೊಲೇಟ್ ಮಿಶ್ರಣವನ್ನು ಹರಡಿ. ಈಗ ಬೇಕಾದ ಯಾವುದೇ ಆಕಾರದ ಚಾಕೊಲೇಟ್ ಅನ್ನು ಮಿಶ್ರಣದಿಂದ ತಯಾರಿಸಿ.
ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ಗಳನ್ನು ಸವಿಯಿರಿ.
ಮಂಗಳೂರು ಶೀರಾ/ಕೇಸರಿಬಾತ್
ಬೇಕಾಗುವ ಸಾಮಾಗ್ರಿಗಳು :
1/4 ಕಪ್ ರವೆ
1 ದೊಡ್ಡ ಗಾಜಿನ ನೀರು
1/2 ಕಪ್ ಸಕ್ಕರೆ
2 ಪಿಂಚ್ ಕೇಸರಿ ಬಣ್ಣ
4 ದೊಡ್ಡ ಚಮಚ ತುಪ್ಪ
1/4 ಚಮಚ ಏಲಕ್ಕಿ ಪುಡಿ
8-10 ಕೇಸರಿ ಎಳೆಗಳು
ಅಗತ್ಯವಿರುವಷ್ಟು ಗೋಡಂಬಿ, ಡ್ರೈಫ್ರೂಟ್ಸ್ Saakshatv cooking recipes Mangalore sheera
ಮಾಡುವ ವಿಧಾನ :
ಬಾಣಲೆಯಲ್ಲಿ 3 ಚಮಚ ತುಪ್ಪ ಬಿಸಿ ಮಾಡಿ, ನಂತರ ರವೆ ಸೇರಿಸಿ ಕೆಂಪಗಾಗುವಂತೆ ಹುರಿಯಿರಿ.
ನಂತರ ಬಿಸಿನೀರು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರ ಮಾಡಿ ಬೇಯಿಸಿ.
ಈಗ ಸಕ್ಕರೆ ಸೇರಿಸಿ , ಕೇಸರಿ ಬಣ್ಣ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ. ಅಂತಿಮವಾಗಿ ಏಲಕ್ಕಿ ಪುಡಿ ಮತ್ತು ಗೋಡಂಬಿ ಸೇರಿಸಿ ಮಿಶ್ರ ಮಾಡಿ.
ಕೇಸರಿ ಎಳೆಗಳು ಮತ್ತು ಡ್ರೈಫ್ರೂಟ್ಸ್‌ಗಳಿಂದ ಅಲಂಕರಿಸಿ . ಸವಿಯಾದ ಮಂಗಳೂರು ಶೀರಾ ರೆಡಿ..
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !
ಬೇಕಾಗುವ ಸಾಮಗ್ರಿಗಳು
ಅನ್ನ – 2 1/2 ಕಪ್
ಮೈದಾ – 1 ಟೀಸ್ಪೂನ್
ಹಾಲಿನ ಪುಡಿ – 1 ಟೀಸ್ಪೂನ್
ತುಪ್ಪ – 1 ಟೀಸ್ಪೂನ್
ಕಾರ್ನ್ ಪ್ಲೋರ್ – 1 ಟೀಸ್ಪೂನ್
ಸಕ್ಕರೆ ಪಾಕ ತಯಾರಿಸಲು
ಸಕ್ಕರೆ 1 ಕಪ್
ನೀರು 1 ಕಪ್
ಏಲಕ್ಕಿ ಪುಡಿ
ನಿಂಬೆ ರಸ
Saakshatv cooking recipes rice rasgulla
ಮಾಡುವ ವಿಧಾನ
ಉಳಿದ ಅನ್ನವನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ತುಪ್ಪದಿಂದ ಗ್ರೀಸ್ ಮಾಡಿದ ಪಾತ್ರೆಗೆ ಅದನ್ನು ಹಾಕಿ.
ಅದಕ್ಕೆ ಮೈದಾ ಹಿಟ್ಟು, ಹಾಲಿನ ಹುಡಿ ಮತ್ತು ಕಾರ್ನ್ ಪ್ಲೋರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಹಿಟ್ಟಿನಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗುತ್ತದೆ.
ಬಳಿಕ ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಸಕ್ಕರೆ ಪಾಕ ತಯಾರಿಸಿ.
ಪಾಕ ಸಿದ್ಧವಾದ ನಂತರ ಸಕ್ಕರೆ ಪಾಕದಲ್ಲಿ, ರಸಗುಲ್ಲಾವನ್ನು ಚೆನ್ನಾಗಿ ಬೇಯಿಸಿ. ಸಕ್ಕರೆ ಪಾಕದ ಪಾತ್ರೆಯನ್ನು ಅರ್ಧ ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ಸ್ವಲ್ಪ ತಣ್ಣಗಾದ ಬಳಿಕ ಸರ್ವ್ ಮಾಡಿ. ಸಿಹಿಯಾದ ರಸಗುಲ್ಲಾವನ್ನು ಸವಿಯಿರಿ.
ಧಿಡೀರ್ (instant) ಅವಲಕ್ಕಿ ಗೋಧಿ ಹಿಟ್ಟು ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ತುಪ್ಪ 1ಕಪ್
ಅವಲಕ್ಕಿ 1 ಕಪ್
ಗೋಡಂಬಿ, ಬಾದಾಮಿ ಸ್ವಲ್ಪ
ಏಲಕ್ಕಿ ಪುಡಿ 1 ಚಮಚ
ಸಕ್ಕರೆ ಪುಡಿ 1 1/2 ಕಪ್
Saakshatv cooking recipes instant laddu
ಮಾಡುವ ವಿಧಾನ
ಅವಲಕ್ಕಿಯನ್ನು ಸಣ್ಣ ಉರಿಯಲ್ಲಿ 5 ನಿಮಿಷ ಹುರಿದು ಪುಡಿ ಮಾಡಿ.
ಒಂದು ಬಾಣಲೆಗೆ 1/2 ಕಪ್ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ ಗೋಡಂಬಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಮೊದಲೇ ಹುರಿದು ಪುಡಿ ಮಾಡಿಕೊಂಡ ಅವಲಕ್ಕಿ ಸೇರಿಸಿ.
ಅದಕ್ಕೆ ಸಕ್ಕರೆ ಪುಡಿ , ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ ನಂತರ ಸ್ಟವ್ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಅಳತೆಗೆ ಲಡ್ಡುಗಳನ್ನು ತಯಾರಿಸಿ.
ರವೆ ಹೆಸರುಬೇಳೆ ಪಾಯಸ
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ 1/2 ಕಪ್
ನೀರು 4 3/4 ಕಪ್
ರವೆ 1/4 ಕಪ್
ಬೆಲ್ಲ 3/4 ಕಪ್,
ಒಣ ಕೊಬ್ಬರಿ ತುರಿ 1/4 ಕಪ್,
ಹಾಲು 1/2 ಕಪ್,
ಹುರಿದ ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ
Saakshatv cooking recipes payasa
ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹೆಸರುಬೇಳೆಯನ್ನು ಒಂದೆರಡು ಬಾರಿ ತೊಳೆದು 4 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿ.
ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದಿಟ್ಟುಕೊಳ್ಳಿ.
ನಂತರ ಬಾಣಲೆಗೆ ರವೆ ಹಾಕಿ ಕೆಂಪು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.
ನಂತರ ರವೆಯನ್ನು ಮುಕ್ಕಾಲು ಕಪ್ ಬಿಸಿ ನೀರಿಗೆ ಸೇರಿಸಿ, ಗಂಟು ಕಟ್ಟದಂತೆ ನೋಡಿಕೊಳ್ಳಿ.
ನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಕರಗಿಸಿಟ್ಟುಕೊಂಡ ಬೆಲ್ಲವನ್ನು ಸಹ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣವು ಒಂದು ಕುದಿ ಬಂದ ನಂತರ ಒಣ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.
ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ. ಈಗ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ ಒಂದು ಕುದಿ ಬರೆಸಿ. ರುಚಿಯಾದ ರವೆ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.
ಉದ್ದಿನ ಉಂಡೆ
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1/2 ಕಪ್
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್
Saakshatv cooking recipes Uddhinabele unde
ಮಾಡುವ ವಿಧಾನ
ಮೊದಲಿಗೆ ಕಡಾಯಿಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ. ಇದಕ್ಕೆ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಹುಡಿ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿ. ಉದ್ದಿನಬೇಳೆ ಉಂಡೆ ಸವಿಯಲು ಸಿದ್ಧ.