ಕೊರೊನಾ ಹೊಡೆತಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ ಸಾಕಷ್ಟು ಬಡ ಕುಟುಂಬಗಳಿಗೆ ತೊಂದರೆ ಆಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ತಮ್ಮ ಕೈಯಲ್ಲಿ ಆಗಿರುವ ಸಹಾಯ ಮಾಡಲು ಮುಂದಾಗಿದ್ದಾರೆ.
ಡಿಕೆಶಿ ಅಭಿಮಾನಿಗಳು ಯಲಹಂಕ ಹುಣಸಮಾರನಹಳ್ಳಿ, ಸುಗ್ಗಟ್ಟ, ಭಾರತಿನಗರ ಜಾಲಹೋಬಳಿ ಸೇರಿದಂತೆ ಹಲವೆಡೆ ಆಹಾರ ಕಿಟ್ ವಿತರಣೆ ಮಾಡಿದರು.ಒಂದು ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಹಾಗೂ ದಿನಬಳಕೆ ವಸ್ತುಗಳ ಕಿಟ್ ನೀಡಲಾಗಿದೆ. ಇದರ ನೇತೃತ್ವ ವಹಿಸಿದ ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್.ಅಂಗಡಿ, ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳನ್ನು ಗುರುತಿಸಿ ಮನೆ ಮನೆಗೆ ಹೋಗಿ ಆಹಾರ ಕಿಟ್ ನೀಡಿದ್ದಾರೆ. ಕಿಟ್ ನಲ್ಲಿ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಸೋಪು, ಪೇಸ್ಟ್, ಮಾಸ್ಕ್ ಇದ್ದವು.








