ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

football- ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರ್ರೆಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..!

admin by admin
July 19, 2026
in Newsbeat, Sports, Uncategorized, ಕ್ರೀಡೆ
India’s Minerva Academy Under-12 boys have added another major international title to their growing collection, successfully defending the Gothia Cup after beating Brazilian side RS Sports Yellow

India’s Minerva Academy Under-12 boys have added another major international title to their growing collection, successfully defending the Gothia Cup after beating Brazilian side RS Sports Yellow

Share on FacebookShare on TwitterShare on WhatsappShare on Telegram

Related posts

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ  ಬೆವರಿಳಿಸಿದ ಲವ್ಲಿ ಸ್ಟಾರ್

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ ಬೆವರಿಳಿಸಿದ ಲವ್ಲಿ ಸ್ಟಾರ್

July 19, 2026
ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

July 19, 2026

ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..!

ranjith bajaj and henna bajaj
ranjith bajaj and henna bajaj

ನಿಮಗಿದು ಗೊತ್ತಿರಲಿ.. ಭಾರತÀದಲ್ಲೂ ಸದ್ದಿಲ್ಲದೇ ನಡೆಯುತ್ತಿದೆ ಫುಟ್‍ಬಾಲ್ ಕ್ರೀಡೆಯ ಮಹಾಕ್ರಾಂತಿ. ಈ ಕ್ರಾಂತಿಯ ಕಿಡಿ ವಿದೇಶಿ ನೆಲದಲ್ಲಿ ಸಣ್ಣ ದೀಪವಾಗಿ ಬೆಳಗುತ್ತಿದೆ. ಯುರೋಪ್, ಅಮೆರಿಕಾ, ಆಫ್ರಿಕನ್ ದೇಶಗಳಂತೆ ಭಾರತದಲ್ಲೂ ಫುಟ್‍ಬಾಲ್ ಸಂಸ್ಕøತಿ ಬೆಳೆಯುತ್ತಿದೆ. ಕ್ರಿಕೆಟ್‍ನ ಜನಪ್ರಿಯತೆಯ ನಡುವೆಯೂ ಭಾರತದಲ್ಲಿ ಫುಟ್‍ಬಾಲ್ ಉತ್ತುಂಗಕ್ಕೇರುವ ಒಂದು ಸಣ್ಣ ಸೂಚನೆ ಸಿಕ್ಕಿದೆ.

ಹೌದು, ಭಾರತದ ಪ್ರತಿಷ್ಠಿತ ವಿನರ್ವಾ ಫುಟ್‍ಬಾಲ್ ಕ್ಲಬ್‍ನ ಎಳೆಯ ಹುಡುಗರು ವಿದೇಶದ ಪ್ರತಿಷ್ಠಿತ ಕ್ಲಬ್ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿದ್ದಾರೆ. ಫಿಫಾ ವಿಶ್ವಕಪ್‍ನಲ್ಲಿ ಭಾರತ ಯಾವಾಗ ಆಡುವುದು ಅನ್ನೋ ಶತಮಾನಗಳ ಕೂಗಿಗೆ ಒಂದು ಚಿಕ್ಕ ಧ್ವನಿ ಕೇಳಿಬರುತ್ತಿದೆ. ಆದ್ರೆ ಈ ಧ್ವನಿ ಎಷ್ಟರ ಮಟ್ಟಿಗೆ ಜೋರಾಗಿ ಮೊಳಗುತ್ತೆ ಅನ್ನೋದಕ್ಕೆ ಸದ್ಯಕ್ಕಂತೂ ಉತ್ತರವವಿಲ್ಲ.

ಆದ್ರೂ 2026ರ ಫಿಫಾ ವಿಶ್ವಕಪ್ ಮುಗಿಯುವ ಮುನ್ನವೇ ಭಾರತದ ಹುಡುಗರು ವಿದೇಶಿ ನೆಲದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಸ್ವೀಡನ್‍ನ ಪ್ರತಿಷ್ಠಿತ 12 ವಯೋಮಿತಿಯ ಗಾಥಿಯಾ ಕಪ್ ಅನ್ನು ಮಿನರ್ವಾ ಅಕಾಡೆಮಿಯ ಹುಡುಗರು ಗೆದ್ದುಕೊಂಡಿದ್ದಾರೆ. ಅದು ಕೂಡ ಬ್ರೆಜಿಲ್‍ನ ಪ್ರತಿಷ್ಠಿತ ಆರ್.ಎಸ್. ಸ್ಪೋಟ್ರ್ಸ್  ಯಲ್ಲೋ ಅಕಾಡೆಮಿ ತಂಡವನ್ನು ಫೈನಲ್‍ನಲ್ಲಿ 2-1 ಗೋಲುಗಳಿಂದ ಮಣಿಸಿದ್ದಾರೆ.

ಈ ಮೂಲಕ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೂ ಪಾತ್ರವಾಗಿದೆ. ಅಲ್ಲದೆ ಈ ಬಾರಿಯ ಹೆಲ್ಸಿಂಕಿ ಕಪ್, ಡ್ಯಾನಾ ಕಪ್, ನಾರ್ವೆ ಕಪ್, ಮಿನಾ ಕಪ್ ಸೇರಿದಂತೆ ಹಲವು ಟ್ರೋಫಿಗಳು ಮಿನರ್ವಾ ಎಫ್‍ಸಿ ಹೆಸರಿಗೆ ಅಂಟಿಕೊಂಡಿವೆ.

ಅದರಲ್ಲೂ ಯೂರೋಪ್‍ನ ಪ್ರತಿಷ್ಠಿತ ಕ್ಲಬ್‍ಗಳಿಗೆ ಭಾರತದ ಎಳೆಯ ಆಟಗಾರರು ಆಘಾತದ ಮೇಲೆ ಆಘಾತ ನೀಡಿದ್ದಾರೆ. ಮುಖ್ಯವಾಗಿ ಲಿವರ್‍ಪೂಲ್ ಕ್ಲಬ್ ಹುಡುಗರನ್ನು 6-0 ಗೋಲುಗಳಿಂದ ಸೋಲಿಸಿದಾಗ ಯೂರೋಪಿಯನ್ ಮಾಧ್ಯಮಗಳು ಕೂಡ ಬೆಚ್ಚಿ ಬಿದ್ದಿದ್ದವು.

ಭಾರತದಲ್ಲಿ ಫುಟ್‍ಬಾಲ್‍ಗೆ ಭವಿಷ್ಯವಿಲ್ಲ. ಫಿಫಾ Àವಿಶ್ವಕಪ್ ನಲ್ಲಿ ಆಡೋದು ಕನಸಿನ ಮಾತು. ಹೀಗೆ ಅಂದುಕೊಂಡವರಿಗೆ ಇದೀಗ ಮಿನರ್ವಾ ಫುಟ್‍ಬಾಲ್ ಕ್ಲಬ್ ಭರವಸೆಯ ಮಿಂಚಾಗಿ ಹೊಳೆಯುತ್ತಿದೆ. ಹೌದು, ಯೂರೋಪಿನ ಹಸಿರು ಮೈದಾನಗಳಲ್ಲಿ ಭಾರತದ ಹುಡುಗರ ಗೆಲುವಿನ ಕಲರವದ ಹಿಂದಿನ ಶಕ್ತಿಯೇ ಮಿನರ್ವಾ ಫುಟ್‍ಬಾಲ್ ಅಕಾಡೆಮಿ.

ಭಾರತದ ಫುಟ್‍ಬಾಲ್ ಕ್ರಾಂತಿಗೆ ಮಿನರ್ವಾ ಎಫ್‍ಸಿ ಕಿಡಿ..!

ಮಿನರ್ವಾ ಎಫ್‍ಸಿ ಭಾರತದ ಫುಟ್‍ಬಾಲ್‍ಗೆ ಹೊಸ ದಿಕ್ಸೂಚಿಯಾಗಿದೆ. ಪಂಜಾಬ್‍ನ ಹತ್ತು ಎಕರೆ ವಿಸ್ತೀರ್ಣದಲ್ಲಿ ರೂಪುಗೊಂಡಿರುವ ಎಂಎಫ್‍ಸಿ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಯೂರೋಪ್‍ನ ಪ್ರತಿಷ್ಠಿತ ಕ್ಲಬ್‍ಗಳಿಗೆ ಸರಿಸಮಾನವಾದ ಸೌಲಭ್ಯಗಳನ್ನು ಹೊಂದಿದೆ. ಫಿಫಾದಿಂದಲೇ ಮಾನ್ಯತೆ ಪಡೆದಿರುವ ಆರು ಅಂತಾರಾಷ್ಟ್ರೀಯ ಮೈದಾನಗಳಿವೆ.

ಜಿಮ್, ಸ್ವಿಮ್ಮಿಂಗ್ ಪೂಲ್, ಫಿಸಿಯೋಥೆರಪಿ, ಮೆಡಿಕಲ್ ಕ್ಲಿನಿಕ್ ಸೇರಿದಂತೆ ಎಲ್ಲವೂ ಹೈಟೆಕ್ ಸೌಲಭ್ಯಗಳಿಂದ ಕೂಡಿದೆ. ಜೊತೆಗೆ ಮಿನರ್ವಾ ಸ್ಕೂಲ್ ಆಫ್ ಎಕ್ಸಲೆನ್ಸ್ ಮೂಲಕ ಗುಣಮಟ್ಟದ ಶಿಕ್ಷಣವನ್ನು ಕೂಡ ನೀಡಲಾಗುತ್ತಿದೆ. ಹಾಗೇ ಮಿನರ್ವಾ ಕ್ರಿಕೆಟ್ ಅಕಾಡೆಮಿಯೂ ಇದೆ.

minerva fc under 12 boys team - winners helsinki cup 2025
minerva fc under 12 boys team – winners helsinki cup 2025

ರಂಜಿತ್ ಬಜಾಜ್ ಕನಸಿನ ಕೂಸು ಮಿನರ್ವಾ ಎಫ್‍ಸಿ..!

ರಂಜಿತ್ ಬಜಾಜ್ ಅವರು ಮಾಜಿ ಫುಟ್‍ಬಾಲ್ ಆಟಗಾರರು. ಭಾರತದ ಫುಟ್‍ಬಾಲ್ ವ್ಯವಸ್ಥೆಯನ್ನು ಬದಲಾಯಿಸಲೇಬೇಕು ಎಂದು ಪಣತೊಟ್ಟಿರುವ ಇವ್ರು, 2005ರಲ್ಲಿ ಈ ಅಕಾಡೆಮಿಯನ್ನು ಶುರು ಮಾಡಿದ್ದರು.

2013ರಲ್ಲಿ ಈ ಅಕಾಡೆಮಿ ವೃತ್ತಿಪರ ಅಕಾಡೆಮಿಯಾಗಿ ರೂಪುಗೊಂಡಿತ್ತು. ಈಗಾಗಲೇ ಸುಮಾರು 240ಕ್ಕೂ ಹೆಚ್ಚು ಆಟಗಾರರನ್ನು ಭಾರತದ ವಿವಿಧ ವಯೋಮಿತಿ ತಂಡಗಳಿಗೆ ಕೊಡುಗೆಯಾಗಿ ನೀಡಿದೆ. ವಿವಿಧ ವಯೋಮಿತಿ ಸೇರಿದಂತೆ ಪ್ರತಷ್ಠಿತ ಟೂರ್ನಿಗಳಲ್ಲೂ ಆಡುತ್ತಿದೆ. ಮುಂದಿನ ಎಂಟು ವರ್ಷಗಳಲ್ಲಿ ಭಾರತ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯಲೇಬೇಕು ಎಂಬುದು ರಂಜಿತ್ ಅವರ ಮುಖ್ಯ ಗುರಿಯಾಗಿದೆ.
.
ರಂಜಿತ್ ಕನಸಿಗೆ ಬೆಂಬಲವಾಗಿ ನಿಂತ ಪತ್ನಿ ಹೆನ್ನಾ ಸಿಂಗ್..!

ರಂಜಿತ್ ಬಜಾಜ್ ಅವರು ತಮ್ಮ ಸ್ವಂತ ಬಲದಿಂದಲೇ ಈ ಅಕಾಡೆಮಿಯನ್ನು ಶುರು ಮಾಡಿದ್ದರು. ಆರಂಭದಲ್ಲಿ ಕ್ಲಬ್‍ಗೆ ಪ್ರಾಯೋಜಕತ್ವ ನೀಡಲು ಯಾರು ಮುಂದೆ ಬಂದಿರಲಿಲ್ಲ. ಹಾಗಾಗಿ ಪತ್ನಿ ಹೆನ್ನಾ ಸಿಂಗ್ ತಮ್ಮ ಒಡವೆಗಳನ್ನು 56 ಲಕ್ಷ ರೂಪಾಯಿಗೆ ಅಡವಿಟ್ಟಿದ್ದರು. ಈ ದುಡ್ಡಿನಿಂದಲೇ ಹುಡುಗರು ಯೂರೋಪ್ ಟೂರ್ನಿಗಳಲ್ಲಿ ಭಾಗವಹಿಸಿದ್ರು. ಇವರಿಬ್ಬರ ತ್ಯಾಗದ ಫಲದಿಂದಾಗಿ ಇವತ್ತು ಮಿನರ್ವಾ ಕ್ಲಬ್ ಹುಡುಗರು ಯೂರೋಪ್‍ನಲ್ಲಿ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ.

ಪ್ರಾಜೆಕ್ಟ್ 2034ರ ರೋಡ್ ಮ್ಯಾಪ್..!

ಇದು ಕೇವಲ ಒಂದು ಖಾಸಗಿ ಕ್ಲಬ್ ಅಲ್ಲ. 2034ರ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯುವಂತೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ಹೊಂದಿರುವ ಕ್ಲಬ್. ದಕ್ಷಿಣ ಭಾರತದ ಬೆಂಗಳೂರು, ಚೆನ್ನೈ, ಕೇರಳ ಹಾಗೂ ಹೈದ್ರಬಾದ್‍ನಲ್ಲಿ ಅಕಾಡೆಮಿಯನ್ನು ಹೊಂದಿದೆ.

ವಿಶ್ವಕಪ್ ಬ್ಯಾಚ್ ಯೋಜನೆಯ ಮೂಲಕ ದೇಶದ 10ರಿಂದ 18 ವಯೋಮಿತಿಯ ಪ್ರತಿಭಾವಂತ ಹುಡುಗರನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ಉಚಿತ ಸ್ಕಾಲರ್‍ಶಿಪ್‍ನಲ್ಲಿ ಮಿನರ್ವಾ ಅಕಾಡೆಮಿಯಲ್ಲಿ ತರಬೇತಿ ಹಾಗೂ ಶಿಕ್ಷಣವನ್ನು ನೀಡಲಾಗುತ್ತದೆ. ಅಲ್ಲದೆ ಹುಡುಗರಿಗೆ ಜಾಗತಿಕ ಮಟ್ಟದಲ್ಲಿ ಆಡುವ ಅವಕಾಶಗಳನ್ನು ನೀಡಲಾಗುತ್ತದೆ.

ಮಿನರ್ವಾ ಕ್ಲಬ್‍ನ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?

ಈ ಅಕಾಡೆಮಿಗೆ ಸೇರಲು ಎರಡು ಅವಕಾಶಗಳಿವೆ. ಅಖಿಲ ಭಾರತ ಓಪನ್ ಟ್ರಯಲ್ಸ್‍ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ನಡೆಸಲಾಗುತ್ತದೆ. 10ರಿಂದ 18 ವಯೋಮಿತಿ ಹುಡುಗರಿಗೆ ಮಾತ್ರ ಅವಕಾಶ. ಇಲ್ಲಿ ಯಾವುದೇ ನೋಂದಣಿ ಶುಲ್ಕಗಳು ಇರುವುದಿಲ್ಲ. ತರಬೇತುದಾರರು ಹುಡುಗರ ಕೌಶಲ್ಯಗಳನ್ನು ಆಧರಿಸಿ ವಿಶ್ವಕಪ್ ಬ್ಯಾಚ್‍ಗೆ ಆಯ್ಕೆ ಮಾಡ್ತಾರೆ. ಇನ್ನು ನೇರ ಪಾವತಿ ಪ್ರವೇಶದ ಮೂಲಕವೂ ಅಕಾಡೆಮಿಯ ಮಾಸಿಕ ಹಾಗೂ ವಾರ್ಷಿಕ ಶಿಬಿರಗಳನ್ನು ಸೇರಿಕೊಳ್ಳಬಹುದು.

ಒಟ್ಟಿನಲ್ಲಿ ಭಾರತದ ಫುಟ್‍ಬಾಲ್ ಭವಿಷ್ಯಕ್ಕೆ ಮಿನರ್ವಾ ಫುಟ್‍ಬಾಲ್ ಅಕಾಡೆಮಿ ಭದ್ರವಾದ ಬುನಾದಿ ಹಾಕುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಫುಟ್‍ಬಾಲ್ ಸಂಸ್ಥೆಗಳು ಮನಪೂರ್ವಕವಾಗಿ ಸಹಕಾರ ನೀಡಿದ್ರೆ ಭಾರತಕ್ಕೆ ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆಯುವುದು ಕಷ್ಟವೇನೂ ಅಲ್ಲ.

ಯಾಕಂದ್ರೆ, ಅಸಾಧ್ಯವಾದದ್ದು ಯಾವುದು ಇಲ್ಲ. ಆದ್ರೆ ಮನಸ್ಸು, ಗುರಿ, ಧೈರ್ಯ, ದೂರದೃಷ್ಟಿಯ ಚಿಂತನೆ, ಸ್ಪಷ್ಟವಾದ ಯೋಜನೆ ಇರಬೇಕು ಅಷ್ಟೇ..! ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳು ಫಿಫಾ ಅಂಗಣದಲ್ಲಿ ಆಡುತ್ತವೆ. ಆದ್ರೆ ನಮಗೆ ಯಾಕೆ ಆಗಲ್ಲ..? ಆಗುತ್ತೆ.. ಒಂದಲ್ಲ ಒಂದು ದಿನ ಟೈಮ್ ಬಂದೇ ಬರುತ್ತೆ..!

ಸನತ್ ರೈ

ShareTweetSendShare
Join us on:

Related Posts

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ  ಬೆವರಿಳಿಸಿದ ಲವ್ಲಿ ಸ್ಟಾರ್

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ ಬೆವರಿಳಿಸಿದ ಲವ್ಲಿ ಸ್ಟಾರ್

by Shwetha
July 19, 2026
0

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಮತ್ತು ಐಷಾರಾಮಿ ಸೌಲಭ್ಯಗಳ ಕುರಿತು ವ್ಯಕ್ತವಾಗಿರುವ ಅನಾಮಧೇಯ ಲೇಖನಕ್ಕೆ ನಟ ನೆನಪಿರಲಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸದೆ...

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ  ಮಾಗಡಿ ಬಾಲಕೃಷ್ಣ

ಬಿಡದಿ ಟೌನ್ ಶಿಪ್ ಬಿಜೆಪಿ ಮತ್ತು ಜೆಡಿಎಸ್ ನ ಪಾಪದ ಕೂಸು: ಇದು ಪಾದಯಾತ್ರೆಯಲ್ಲ ಪಶ್ಚಾತ್ತಾಪದ ಯಾತ್ರೆ -ದಾಖಲೆ ಬಿಚ್ಚಿಡಲು ಸಜ್ಜಾದ ಮಾಗಡಿ ಬಾಲಕೃಷ್ಣ

by Shwetha
July 19, 2026
0

ಬಿಡದಿ ಉಪನಗರ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಮಾಗಡಿಯ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿಗಳಾದ...

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

ನಮ್ಮ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಂ ವಾಂಗ್ಚುಕ್ ಪತ್ನಿ ಆಗ್ರಹ

by Shwetha
July 19, 2026
0

20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿಜ್ಞಾನಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿರುವ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಮಹತ್ವದ...

ನಿಮ್ಮ ಜಾತಕ ನಿಮಗೊತ್ತಿಲ್ವಾ? ಟಾಕ್ಸಿಕ್ ಸಿನಿಮಾ ಆವರೇಜ್ ಎಂದ ಗುರೂಜಿಗೆ ಬೆವರಿಳಿಸಿದ ಯಶ್ ಫ್ಯಾನ್ಸ್

ನಿಮ್ಮ ಜಾತಕ ನಿಮಗೊತ್ತಿಲ್ವಾ? ಟಾಕ್ಸಿಕ್ ಸಿನಿಮಾ ಆವರೇಜ್ ಎಂದ ಗುರೂಜಿಗೆ ಬೆವರಿಳಿಸಿದ ಯಶ್ ಫ್ಯಾನ್ಸ್

by Shwetha
July 19, 2026
0

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ ವಿರುದ್ಧ ರಾಕಿ ಭಾಯ್ ಅಭಿಮಾನಿಗಳು ಯುದ್ಧ ಸಾರಿದ್ದಾರೆ. ಕೆಜಿಎಫ್ ಸರಣಿಯ...

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರಕಟ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರಕಟ

by Shwetha
July 19, 2026
0

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವೈಶಿಷ್ಟ್ಯಪೂರ್ಣ ಚಲನಚಿತ್ರ ವಿಭಾಗದಲ್ಲಿ 'ಆರ್ಟಿಕಲ್ 370' ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.ಇದೇ ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram