ಹಲಾಲ್ ಮಾಂಸದ ಪೂರೈಕೆ – ಟೆಂಡರ್ ಕರೆದಿದ್ದ ಸ್ಕೂಲ್ ವಿರುದ್ಧ ಪ್ರಕರಣ
ಉತ್ತರಾಖಂಡ : ಉತ್ತರಾಖಂಡದ ಡೆಹ್ರಾಡೂನಿನಲ್ಲಿರುವ ಪ್ರತಿಷ್ಠಿತ ವೆಲ್ಹಾಮ್ ಬಾಲಕರ ವಸತಿ ಶಾಲೆಯ ಮೆಸ್ ಗಾಗಿ ಹಲಾಲ್ ಮಾಂಸದ ಪೂರೈಕೆದಾರರಿಂದ ಟೆಂಡರ್ ಗಳನ್ನು ಕರೆದಿದ್ದ ಹಿನ್ನೆಲೆ ಶಾಲೆಯ ಮೇಲಾಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರ ವಿರುದ್ಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಥವಾ ಸೃಷ್ಟಿಸುವ ಹೇಳಿಕೆಗಳಿಗೆ ಸಂಬಂಧಿಸಿದ ಐಪಿಸಿಯ ಕಲಂ 505(2)ರಡಿ ಈ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳನ್ನು ಮತಾಂತರಗೊಳಿಸುವ ಉದ್ದೇಶದಿಂದ ಹಲಾಲ್ ಮಾಂಸದ ಪೂರೈಕೆಗಾಗಿ ಶಾಲೆಯು ಟೆಂಡರ್ಗಳನ್ನು ಕರೆದಿದೆ. ಇದರಿಂದಾಗಿ ಹಿಂದು ಸಮುದಾಯದ ಭಾವನೆಗಳಿಗೆ ನೋವುಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಕೇಟ್ ವೇಗದಲ್ಲಿ ವ್ಯಾಪಿಸುತ್ತಿದೆ ಡೆಲ್ಟಾ ಪ್ಲಸ್..!
ಆಕ್ಲಾಂಡ್ ನ ಮೃಗಾಲಯದಲ್ಲಿ ಪ್ರಾಣಿಗಳಿಗೆ ಕೋವಿಡ್ ಲಸಿಕೆ
ಜಪಾನ್ ನಲ್ಲಿ ಮಣ್ಣು ಕುಸಿತ : ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿ ನಾಪತ್ತೆ
‘ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್ 3ನೇ ಅಲೆ ಗರಿಷ್ಟ ಮಟ್ಟಕ್ಕೆ ಏರಿಕೆ’