ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ | ಗಂಧದ ತುಂಡುಗಳು ಪತ್ತೆ – Saaksha Tv
ಬಾಗಲಕೋಟೆ: ಎಸಿಬಿ ಅಧಿಕಾರಿಗಳು ಬಾಗಲಕೋಟೆಯ ಅರಣ್ಯ ಇಲಾಖೆ ಅಧಿಕಾರಿ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ನವಗರದ 15ನೇ ಸೆಕ್ಟರ್ನಲ್ಲಿರುವ ಬಾದಾಮಿ ಆರ್ಎಫ್ಒ ಶಿವಾನಂದ ಖೇಡಗಿ ಅವರ ಕಚೇರಿ, ಮನೆ ಮತ್ತು ಅಂಗಡಿ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬಾದಾಮಿಯಲ್ಲಿರುವ ಅರಣ್ಯ ಇಲಾಖೆ ಕಚೇರಿ ಹಾಗೂ ಶಿವಾನಂದ ಅವರ ಅಳಿಯಂದಿರ ಎರಡು ಮನೆಗಳ ಮೇಲೂ ದಾಳಿ ಮಾಡಿ ಪ್ರಮುಖ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ದಾಳಿ ವೇಳೆ ಶಿವಾನಂದ ಖೇಡಗಿ ಅವರ ನಿವಾಸದಲ್ಲಿ ಕೌಂಟಿಂಗ್ ಮಷಿನ್ ಪತ್ತೆ, ಗಂಧದ ತುಂಡುಗಳು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಕಾಗದ ಪತ್ರಗಳ ಶೋಧ ಕಾರ್ಯ ಮುಂದುವರೆದಿದೆ.