ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಮಾಜಿ ಡಿಸಿಎಂ ಕುಸಿದು ಬಿದ್ದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ತೆಲಂಗಾಣ ಮಾಜಿ ಡಿಸಿಎಂ ಮಹಮೂದ್ ಅಲಿ ಕುಸಿದು ಬಿದ್ದಿದ್ದಾರೆ. ಮಹಮೂದ್ ಅಲಿ ಅವರ ಆರೋಗ್ಯ ಹದಗೆಟ್ಟಿತ್ತು. ತೆಲಂಗಾಣ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕೆಲವು ಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
#WATCH | Hyderabad: Former Telangana Deputy CM Mahmood Ali faints during #RepublicDay2024 celebrations at Telangana Bhawan. pic.twitter.com/GCzoMb9l8U
— ANI (@ANI) January 26, 2024
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದರು. ನೀರು ಕೊಡಿ ಎಂದು ಜನರು ಕೈಮುಗಿದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.