ತುಮಕೂರು ರಾಜಕೀಯದಲ್ಲಿ ಮತ್ತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ತಮ್ಮ ಪ್ರಭಾವ ತೋರಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದರೂ, ಇದೀಗ DCC ಬ್ಯಾಂಕ್ ಅಧ್ಯಕ್ಷರಾಗಿ 7ನೇ ಬಾರಿ ಅವಿರೋಧವಾಗಿ ಆಯ್ಕೆ ಆಗಿ ತಮ್ಮ ಶಕ್ತಿ ಸಾಬೀತು ಮಾಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಲೇ ಯಾವುದೇ ಸ್ಪರ್ಧೆ ನಡೆಯಲಿಲ್ಲ. ಆದರೆ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ 8 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಉಳಿದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಾಜಣ್ಣ ಪರ ಗುಂಪು ಭರ್ಜರಿ ಜಯ ಸಾಧಿಸಿದೆ.
ಆಯ್ಕೆಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಜಣ್ಣ, ನಾನು ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. BJP ಸೇರೋದ್ರ ಬಗ್ಗೆ ಹರಿದಾಡ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ, ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದರಿಂದ, ರಾಜಣ್ಣ ತಮ್ಮ ಬಲಿಷ್ಠ ನಾಯಕತ್ವವನ್ನು ಮತ್ತೆ ಒಂದು ಬಾರಿ ತೋರಿಸಿದ್ದು, ತುಮಕೂರು ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.







