ಜನ್ಮದಿನದಂದೇ ನಿಧನರಾದ ಮಾಜಿ ಸಚಿವ ಎಸ್, ಆರ್, ಮೋರೆ….
ಧಾರವಾಡ : ನಾಲ್ಕು ಭಾರಿ ಧಾರವಾಡದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ಎಸ್ ಆರ್ ಮೋರೆ ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಎಸ್ ಆರ್ ಮೋರೆ ಅವರು ಜನ್ಮದಿನದಂದೆ ಕೊನೆಯುಸಿರೆಳೆದಿರುವುದು ವಿಧಿಯಾಟ. 82 ವರ್ಷದ ಮೋರೆ ಅವರು ಅನಾರೋಗ್ಯದ ನಿಮಿತ್ತ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ.
ಧರ್ಮ ಸಿಂಗ್ ಅವರ ಸಂಪುಟದಲ್ಲಿಪೌರಾಡಳಿತ ಸಚಿವರಾಗಿ ಬಂಗಾರಪ್ಪನವರ ಆಡಳಿತದಲ್ಲಿ ಸಹಕಾರಿ ಸಚಿವರಾಗಿ ಕೆಲಸ ಮಾಡಿದ್ದರು.








