ಮೊದಲ ಸಲ ಕಣಿವೆ ನಾಡಿನಲ್ಲಿ ಕಾರ್ ರೇಸ್ ಶೋ ಕಣಿವೆ ನಾಡು ಶ್ರೀನಗರದಲ್ಲಿ ನಡೆಯಲಿದೆ. ಹೆಸರಾಂತ ಫಾರ್ಮುಲಾ 4 ಕಾರ್ ರೇಸ್ ಚಾಲಕರು ಭಾಗವಹಿಸುತ್ತಿದ್ದು, ಸುಮಾರು 4 ಗಂಟೆಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ‘
ಫಾರ್ಮುಲಾ ಶ್ರೀನಗರ ಹೆಸರಿನ ಈವೆಂಟ್ ನಲ್ಲಿ ಲೀಗ್ ನ ಪ್ರೀಮಿಯಂ ಎಫ್4 ಕಾರುಗಳು ಕಾಣಿಸಿಕೊಳ್ಳಲಿದ್ದು, ಮಾರ್ಚ್ 17 ರಂದು ದಾಲ್ ಲೇಕ್ ರಸ್ತೆಯಲ್ಲಿ ನಡೆಯಲಿದೆ. ಪ್ರೇಕ್ಷಕರು ಯಾವುದೇ ಟಿಕೆಟ್ ಖರೀದಿಸುವಂತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ಸಾಧ್ಯತೆಗಳಿವೆ.
ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದ್ದು, 2 ಗಂಟೆಗೆ ರವರೆಗೆ 1.7 ಕಿಮೀ ಮಾರ್ಗದಲ್ಲಿ ಸ್ಪರ್ಧೆ ನಡೆಯಲ್ಲಿದೆ. 2022 ಮತ್ತು 2023 ರಲ್ಲಿ 2 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಈವೆಂಟ್‌ನಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸುತ್ತಿದ್ದು, ಸುಂದರವಾದ ದಾಲ್ ಲೇಕ್ ರಸ್ತೆಯ ತಿರುವುಗಳು ಮತ್ತು ಬೆಟ್ಟಗಳಲ್ಲಿ ಸೂಪರ್‌ಫಾಸ್ಟ್ ಕಾರ್ ರೇಸಿಂಗ್ ಮೂಲಕ ಸ್ಥಳೀಯರನ್ನು ಆಕರ್ಷಿಸಲಿವೆ.