ಮದುವೆಯಾಗುವುದಾಗಿ ನಂಬಿಸಿ ಅನೇಕ ಯುವತಿಯರಿಗೆ ವಂಚಿಸಿದ್ದ ನಕಲಿ ಸೇನಾಧಿಕಾರಿ ಅಂದರ್..!
ಬೆಂಗಳೂರು: ವ್ಯಕ್ತಿಯೊಬ್ಬ ತನ್ನನ್ನ ತಾನು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾಧಿಕಾರಿಯೆಂದು ಸುಳ್ಳು ಹೇಳಿಕೊಂಡು ಅನೇಕ ಹೆಣ್ಮಕ್ಕಳ ಜೀವನದಲ್ಲಿ ಚೆಲ್ಲಾಟವಾಡಿದ್ದ. ಇದೀಗ ಈ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈತ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸುತ್ತಿದ್ದ.
ಬೆಳಗಾವಿ ಮೂಲದ ಅಂಜನೇಷ್ ಮಠಪತಿ (31) ಬಂಧಿತ ಆರೋಪಿಯಾಗಿದ್ದಾನೆ. ಈತ ತಾನು ಸೇನಾಧಿಕಾರಿ ಎಂದು ಹೇಳಿಕೊಂಡು ಯುವತಿಯರಿಗೆ ಮದುವೆಯಾಗುವುದಾಗಿ ಹೇಳಿ ನಂಬಿಸುತ್ತಿದ್ದ. ಇದೇ ವೇಳೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕಾರು ಕೊಡಿಸುವುದಾಗಿಯೂ ಕೋಟ್ಯಂತರ ರೂಪಾಯಿ ವಂಚಿಸಿದ್ದ ಎನ್ನಲಾಗಿದೆ.
ಇಲ್ಲಿಯವರೆಗೂ ಮೂವರು ಯುವತಿಯರನ್ನು ನಂಬಿಸಿ ವಂಚಿಸಿದ್ದಾನೆ. ಅಲ್ಲದೇ ಇಬ್ಬರು ಯುವತಿಯರೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನ ವಿರುದ್ಧ ಸುಬ್ರಹಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈತನಿಂದ ವಂಚನೆಗೊಳಗಾದ ಪರಿವಾರದವರು 23 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಫ್ರೀ..!
18 ವರ್ಷ ಮೇಲ್ಪಟ್ಟವರು ಯಾವುದೇ ಧರ್ಮವನ್ನ ಆಯ್ದುಕೊಳ್ಳಲು ಸ್ವತಂತ್ರರು – ಸುಪ್ರೀಂ ಕೋರ್ಟ್..!








