ಕಿರುತೆರೆ ನಟಿ ಅಡ್ಡಾಲ ಐಶ್ವರ್ಯ ವಿರುದ್ಧ ಪತಿ ಡ್ರಗ್ ಸೇವನೆ, ವಂಚನೆ, ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.
ಅಡ್ಡಾಲ ಐಶ್ವರ್ಯ ಅವರು ತಮಗೆ ಮ್ಯಾಟ್ರಿಮೊನಿ ಮೂಲಕ ಪರಿಚಯವಾಗಿದ್ದಳು. ನಂತರ ಮದುವೆ ಮಾಡಿಕೊಂಡೇವು. ಕೆಲ ದಿನಗಳ ಹಿಂದೆಯಷ್ಟೇ ಆಕೆ ಏನು ಅನ್ನುವುದು ಗೊತ್ತಾಯಿತು ಎಂದು ಪತಿ ಶ್ಯಾಮ್ ದೂರಿನಲ್ಲಿ ಆರೋಪಿಸಿದ್ದಾರೆ.
ನಟಿ ಡ್ರಗ್ಸ್ ಸೇವನೆ ಮಾಡುತ್ತಾರೆ. ಸಿಗರೇಟು ಹಾಗೂ ಅಕ್ರಮ ಸಂಬಂಧ ಕೂಡ ಹೊಂದಿದ್ದಾಳೆ. ಮದುವೆ ಹೆಸರಿನಲ್ಲಿ ತಮಗೆ ಮೋಸ ಆಗಿದೆ ಎಂದು ಶ್ಯಾಮ್ ದೂರು ನೀಡಿದ್ದಾರೆ. ಡಿವೋರ್ಸ್ ಪಡೆಯಲು ಒಪ್ಪಿಗೆ ನೀಡುತ್ತಿಲ್ಲ ಎಂದು ಕೂಡ ಆರೋಪಿಸಿದ್ದಾರೆ.