ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ವರ ಹುಡುಕಿ ಬೆಂಗಳೂರಿಗೆ ಆಗಮಿಸಿದ್ದ ವಧುವಿನ ಪೋಷಕರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಮಿಳುನಾಡಿನ ಕೊಯಮತ್ತೂರಿನ ದಂಪತಿ ತಮ್ಮ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆಯಾಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಈ ಮಾತು ನಂಬಿ ಮದುವೆ ಮಾತುಕತೆಗೆಂದು ಯುವತಿಯ ಪೋಷಕರು ರೈಲಿನಲ್ಲಿ ಕೊಯಮತ್ತೂರಿನಿಂದ ಬೆಂಗಳೂರಿಗೆ ಬಂದಿದ್ದರು.
ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಬಂದು ಫೋನ್ ಮಾಡಿದ ಸಂದರ್ಭದಲ್ಲಿ ಪವನ್ ಅಗರವಾಲ್, ನನಗೆ ಮನೆಯ ಹತ್ತಿರ ಸ್ವಲ್ಪ ಕೆಲಸ ಇದೆ. ತನ್ನ ಬದಲು ತನ್ನ ಚಿಕ್ಕಪ್ಪ ಬಂದು ಮನೆಗೆ ಕರೆದುಕೊಂಡು ಬರುತ್ತಾರೆ ಎಂದಿದ್ದ. ಆನಂತರ ಕರೆ ಮಾಡಿ, ಚಿಕ್ಕಪ್ಪ ಪರ್ಸ್ ಮರೆತು ಬಂದಿದ್ದಾರೆ. ಅವರಿಗೆ 10 ಸಾವಿರ ರೂ. ನೀಡಿ ಮನೆಗೆ ಬಂದ ಮೇಲೆ ಮರಳಿ ನೀಡುತ್ತಾರ ಎಂದು ಹೇಳಿದ್ದಾರೆ.
ಇತ್ತ ಚಿಕ್ಕಪ್ಪ ರಿಸರ್ವೇಷನ್ ಮಾಡಿಸಲು ಹೋಗಿದ್ದವ ಮರಳಿ ಬಂದಿಲ್ಲ. ಇತ್ತ ಕರೆ ಮಾಡಿದಾಗ ಆತನ ಫೋನ್ ಸ್ವೀಚ್ ಆಫ್ ಆಗಿದೆ. ನಂತರ ಈ ಕುರಿತು ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.