ಕನ್ನಡದ ಬಹುನಿರೀಕ್ಷಿತ ಚಿತ್ರ `ಫ್ರೆಂಚ್ ಬಿರಿಯಾನಿ’ ಇದೇ ಜುಲೈ 24 ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಪುನೀತ್ ರಾಜ್ ಕುಮಾರ್ ರವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಫ್ರೆಂಚ್ ಬಿರಿಯಾನಿ ಪೋಸ್ಟರ್ ನ್ನ ಅಮೆಜಾನ್ ಪ್ರೈಮ್ ಇಂದು ಬಿಡುಗಡೆ ಮಾಡಿದೆ.
ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ತಯಾರಾಗಿರುವ ರಾಗಿಣಿ ಚಂದ್ರನ್ ಅಭಿನಯದ ʻಲಾʼ ಚಿತ್ರ ಸಹ ಅಮೆಜಾನ್ ಪ್ರೈಮ್ ನಲ್ಲಿ ಇದೇ ಜುಲೈ 17 ಕ್ಕೆ ತೆರೆಕಾಣುತ್ತಿದೆ. ಅದಾದ ಕೇವಲ ಒಂದೇ ವಾರಕ್ಕೆ ಫ್ರೆಂಚ್ ಬಿರಿಯಾನಿ ಸಹ ಅಮೆಜಾನ್ ಪ್ರೈಮ್ ನಲ್ಲೇ ತೆರೆಕಾಣಲಿದೆ.
ಈ ಎರಡೂ ಚಿತ್ರಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗದೆ ನೇರವಾಗಿ ಓಟಿಟಿ ಪ್ಲಾಟ್‌ಫಾರಂ ಆದ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿರೋದು ವಿಶೇಷ.
ಹಾಸ್ಯ ಕಥಾನಕ ಹೊಂದಿರುವ ಈ ಚಿತ್ರವನ್ನು ಪನ್ನಾಗಭರಣ ನಿರ್ದೇಶಿಸಿದ್ದಾರೆ ಮತ್ತು ಡ್ಯಾನಿಶ್ ಸೇಠ್, ಪಿಟೋಬಾಶ್ ತ್ರಿಪಾಠಿ, ಸಾಲ್ ಯೂಸುಫ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ
ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ...








