G-20 indian president : ಇಂದಿನಿಂದ ಒಂದು ವರ್ಷ ಜಿ-20 ರಾಷ್ಟ್ರಗಳಿಗೆ ಭಾರತವೇ ಅಧ್ಯಕ್ಷ !
ಇಂದಿನಿಂದ ಒಂದು ವರ್ಷ ಜಿ-20 ರಾಷ್ಟ್ರಗಳಿಗೆ ಭಾರತ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಈ ಗೌರವದ ಸವಿನೆನಪಿಗಾಗಿ ದೇಶದಲ್ಲಿ ಒಂದು ವಾರ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.
ಇತ್ತೀಚೆಗೆ ಅನಾವರಣಗೊಂಡ ಜಿ20 ಲಾಂಛನದೊಂದಿಗೆ ತಾಜ್ ಮಹಲ್, ಅಗ್ರಾ ಕೋಟೆ ಸೇರಿದಂತೆ ದೇಶದ 100 ಸ್ಮಾರಕಗಳು ಝಗಮಗಿಸಲಿವೆ.
ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದ ಏಳುದಳಗಳ ಮೇಲೆ ವಿಶ್ವವನ್ನು ಚಿತ್ರಿಸಿ, ಅದರಲ್ಲಿ ಜಿ20 ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಲಾಂಛನವು ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಜಿ20 ಲಾಂಛನದ ಕೆಳಗೆ ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದ್ದು, ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯ ಮತ್ತು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬುದು ಭಾರತದ ಜಿ20 ಅಧ್ಯಕ್ಷತೆಯ ಥೀಮ್ ಆಗಿದೆ.
ತನ್ನ ಅಧ್ಯಕ್ಷತೆಯಲ್ಲಿ ಭಾರತವು ಈ ವರ್ಷ ದೇಶದ ಅನೇಕ ನಗರಗಳಲ್ಲಿ 200 ಸಮ್ಮೇಳನಗಳನ್ನು ಆಯೋಜಿಸಲಿದೆ.
G-20 Indian president: One year from today, India will be the president of G-20 countries!