G20 : ರಷ್ಯಾ ವಿದೇಶಾಂಗ ಸಚಿವರಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು..!!
G20 ಶೃಂಗಸಭೆಗಾಗಿ ಬಾಲಿಗೆ ಆಗಮಿಸಿದ್ದ ರಷ್ಯಾ ವಿದೇಶಾಂಗ ಸಚಿವರಿಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಚಿವ ಸೆರ್ಗೆ ಲಾವ್ರೊವ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ..
ರಷ್ಯಾದ ಸಚಿವರಿಗೆ ದ್ವೀಪ ರಾಷ್ಟ್ರದ ರೆಸಾರ್ಟ್ ನಲ್ಲಿ ಇಂಡೋನೇಶ್ಯಾ ಸರ್ಕಾರದ ಮೂವರು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ..








