Gali Janardhana Reddy’s Re entry to the politics-ತಾಯಿ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ, – ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ : ತಾಯಿ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ, ಬಳ್ಳಾರಿಯಲ್ಲಿ ನಾನು ಬದುಕ್ಕಿದ್ದರೆ ಸಾಕು ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ನನ್ನ ಮೇಲೆ ಒಂದು ತಪ್ಪು ಕೇಸನ್ನು ಹಾಕಿದ್ದಾರೆ. ಹೀಗಾಗಿ ಕೇಸ್ ನಲ್ಲಿ ಸೋಲುವ ಭಯಕ್ಕೆ ಕೇಸನ್ನ ನಡೆಸೋದಕ್ಕೆ ಹಿಂದೇಟು ಹಾಕಿ ವಿಳಂಬ ಮಾಡುತ್ತಿದ್ದಾರೆ. ನಾನು ಬಳ್ಳಾರಿಯಲ್ಲಿ ಇರಲು ಅನುಮತಿ ಕೇಳಿರುವೆ.
ಕಳೆದ ಹದಿನಾಲ್ಕು ತಿಂಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ಆದರೂ ಪದೇ ಪದೇ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 12 ವರ್ಷಗಳಿಂದ ನನ್ನ ಮೇಲಿನ ಕೇಸ್ ಗಳು ನಡೆಯುತ್ತಿವೆ. ಹೀಗಾಗಿ ಪ್ರತಿದಿನ ಕೇಸ್ ನಡೆಸುವಂತೆ ನಾನು ಕೋಟ್ ಗೆ ಮನವಿ ಮಾಡಿಕೊಂಡಿದ್ದೇನೆ.
ಆದರೇ ಕೇಸ್ ನಡೆಯುವಾಗ ನಾನು ಬಳ್ಳಾರಿಯಲ್ಲಿ ಇರಬಾರದು ಎಂದು ಸಿಬಿಐ ನವರು ಮನವಿ ಮಾಡಿದ್ದಾರೆ. ಆದ್ರೆ ನಾನು ಮಗಳ ಹೆರಿಗೆ ಆಗಿದೆ ಅದಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವೆ ಎಂದು ತಿಳಿಸಿದರು.
ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದೇನೆ. ಶೀಘ್ರದಲ್ಲಿಯೇ ಮೂರ್ನಾಲ್ಕು ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ ಎಂದರು.