ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಆಟ ಸಾಕು.. ತಂಡ ಕಟ್ಟು.. ನೀನು ಇನ್ನೆಷ್ಟು ದಿನ ಆಡ್ತಿಯಾ..?

Game Over? Dhoni's Dilemma: To Play or Not to Play the Next IPL

Shwetha by Shwetha
May 8, 2025
in ಕ್ರಿಕೆಟ್, Newsbeat, Sports, ಕ್ರೀಡೆ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಆಟ ಸಾಕು.. ತಂಡ ಕಟ್ಟು.. ನೀನು ಇನ್ನೆಷ್ಟು ದಿನ ಆಡ್ತಿಯಾ..?

ವಯಸ್ಸು 44 ಆಯ್ತು…ಇನ್ನೂ ಆಡಬೇಕು ಎಂದು ಮನಸ್ಸು ಹೇಳ್ತಾ ಇದೆ. ಆದ್ರೆ ದೇಹ ಸ್ಪಂದಿಸಬೇಕಲ್ವಾ..? ನೋಡೋಣ.. ಮುಂದಿನ ಏಳೆಂಟು ತಿಂಗಳಲ್ಲಿ ಏನೇನು ಆಗುತ್ತೆ ಅಂತ.. ಆಮೇಲೆ ನಿರ್ಧಾರ ತಗೊಂಡ್ರೆ ಆಯ್ತು.. ಅಂದ ಮೇಲೆ ಧೋನಿ ಮುಂದಿನ ಐಪಿಎಲ್‍ನಲ್ಲೂ ಆಡುವುದು ಬಹುತೇಕ ಖಚಿತ.
ನಿಜ, ಐಪಿಎಲ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಶ್ನಾತೀತ ಆಟಗಾರ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿಯೇ ಜೀವಾಳ. ಧೋನಿ ಇಲ್ಲದಿದ್ರೆ ಸಿಎಸ್‍ಕೆ ತಂಡವನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ಯಲ್ಲೋ ಆರ್ಮಿಯ ಅಭಿಮಾನಿಗಳಿಗೆ ಧೋನಿಯೇ ತಲೈವಾ. ಧೋನಿ ಅಂದ್ರೆ ಸಿಎಸ್‍ಕೆ.. ಸಿಎಸ್‍ಕೆ ಅಂದ್ರೆ ಧೋನಿ. ಅಷ್ಟರ ಮಟ್ಟಿಗೆ ಧೋನಿ ಸಿಎಸ್‍ಕೆ ತಂಡವನ್ನು ಆವರಿಸಿಕೊಂಡುಬಿಟ್ಟಿದ್ದಾರೆ. ಆದ್ರೆ ಧೋನಿಯ ಬ್ಯಾಟಿಂಗ್ ಅಬ್ಬರ ಮುಂಚಿನ ರೀತಿಯಲ್ಲಿ ಇಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು. ಕೊನೆಯ ಓವರ್‍ನ ಕೊನೆಯ ಎಸೆತದವರೆಗೆ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿದ್ದ ಧೋನಿಯ ಆ ದಿನಗಳು ಮುಗಿದು ಹೋಗಿದೆ. ಅದರಲ್ಲಿ ಎರಡು ಮಾತಿಲ್ಲ. ಐಪಿಎಲ್ ಟೂರ್ನಿಯ 20ನೇ ಓವರ್‍ನಲ್ಲಿ 244 ಸ್ಟ್ರೈಕ್ ರೇಟ್‍ನಲ್ಲಿ 844 ರನ್ ದಾಖಲಿಸಿರುವ ಧೋನಿಯ ಬ್ಯಾಟಿಂಗ್ ತಾಕತ್ತು ಎಂತಹುದ್ದು ಎಂಬುದು ಗೊತ್ತಿಲ್ಲದ ವಿಚಾರವೇನು ಅಲ್ಲ.
saakshatv.com
ಆದ್ರೆ ಈಗ ಟಿ-20 ಕ್ರಿಕೆಟ್‍ನ ವೇಗದ ಆಟಕ್ಕೆ ಒಗ್ಗಿಕೊಳ್ಳುವುದು ಮಹಿಗೆ ಸ್ವಲ್ಪ ಕಷ್ಟವಾಗುತ್ತಿದೆ. ಹಾಗಾಗಿ ಧೋನಿಯ ಬ್ಯಾಟ್ ನಿಂದ ರನ್‍ಗಳು ಹರಿದು ಬರುತ್ತಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿದೆ. ಹಾಗೇ ಕ್ರಿಕೆಟ್ ಪಂಡಿತರು ಕೂಡ ಧೋನಿಯ ಬ್ಯಾಟಿಂಗ್ ಬಗ್ಗೆ ತುಸು ಕೋಪದಿಂದಲೇ ಟೀಕೆ ಮಾಡ್ತಾ ಇದ್ದಾರೆ. ಆದ್ರೆ ವಿಕೆಟ್ ಹಿಂದುಗಡೆಯ ಕೌಶಲ್ಯ ಇದೆಯಲ್ವಾ ಅದು ಎಲ್ಲವನ್ನು ಮರೆ ಮಾಚುವಂತೆ ಮಾಡುತ್ತಿದೆ. ಗೂಟ ರಕ್ಷಕನಾಗಿ ಧೋನಿಯನ್ನು ಮೀರಿಸುವ ಇನ್ನೊಬ್ಬ ಯುವ ಆಟಗಾರ ಇನ್ನೂ ಬಂದಿಲ್ಲ. ಹಾಗಾಗಿ ವಿಕೆಟ್ ಕೀಪರ್ ಆಗಿ ಧೋನಿ ಸಿಎಸ್‍ಕೆ ತಂಡಕ್ಕೆ ಸೇಫ್ ಆಗಿದ್ದಾರೆ.
ಅಂದ ಹಾಗೇ ಸಿಎಸ್‍ಕೆ ತಂಡಕ್ಕೆ ಧೋನಿಯೇ ಆಧಾರ ಸ್ತಂಭ. ಧೋನಿ ಇಲ್ಲದಿದ್ರೆ ಸಿಎಸ್‍ಕೆ ತಂಡದ ಮಾರ್ಕೆಟಿಂಗ್ ವ್ಯಾಲ್ಯೂ ಕಮ್ಮಿಯಾಗುತ್ತದೆ. ಹೇಗೆ ಆರ್‍ಸಿಬಿಗೆ ವಿರಾಟ್ ಕೊಹ್ಲಿ ಅನಿವಾರ್ಯನೋ ಹಾಗೇ ಸಿಎಸ್‍ಕೆಗೆ ಧೋನಿ ಕೂಡ ಅನಿವಾರ್ಯ. ಮ್ಯಾನೇಜ್‍ಮೆಂಟ್‍ನ ಹಣ ಮತ್ತು ಬ್ರ್ಯಾಂಡ್ ವ್ಯಾಲ್ಯೂ ಲೆಕ್ಕಚಾರದ ಪ್ರಕಾರ ಧೋನಿ ಇನ್ನೇರಡು ವರ್ಷ ಆಡಿದ್ರೂ ಅಚ್ಚರಿ ಏನಿಲ್ಲ. ಅದು ಏನೇ ಇರಲಿ, ಧೋನಿಯ ನಿರ್ಧಾರವನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಸ್ವತಃ ಧೋನಿ ಹೇಳುವಂತೆ ಸಿಎಸ್‍ಕೆ ತಂಡ ನನ್ನದು. ಆಡುವುದು ಯಾವಾಗ ಬೇಡ ಅನ್ನಿಸುತ್ತದೆಯೋ ಆವತ್ತು ನಿವೃತ್ತಿಯಾಗುತ್ತೇನೆ ಎಂದು ಹೇಳಿದ ಮೇಲೆ ಧೋನಿಯ ನಿವೃತ್ತಿಯ ಮೇಲೆ ಒತ್ತಡ ಹೇರುವ ರೈಟ್ಸ್ ನಮಗಿಲ್ಲ.
ಅಷ್ಟಕ್ಕೂ ಧೋನಿ ಸಿಎಸ್‍ಕೆ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ್ದ ಕ್ಯಾಪ್ಟನ್. ಐಪಿಎಲ್‍ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಸಿಎಸ್‍ಕೆ ಮುಂಚೂಣಿಯಲ್ಲಿದೆ. ಆದ್ರೆ ಧೋನಿಯ ನಂತ್ರ ಮುಂದಿನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಧೋನಿ ನಾಯಕತ್ವ ಕೆಳಗಿಳಿದ ನಂತ್ರ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ರೂ ಕೊನೆ ಕ್ಷಣದಲ್ಲಿ ಧೋನಿಯೇ ನಾಯಕತ್ವ ವಹಿಸಿಕೊಳ್ಳಬೇಕಾಯ್ತು. ಹಾಗೇ ಋತುರಾಜ್ ಗಾಯಕ್ವಾಡ್ ಅಂತೂ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು. ಇದೀಗ ಮತ್ತೆ ಸಿಎಸ್‍ಕೆ ತಂಡವನ್ನು ಧೋನಿಯೇ ಮುನ್ನಡೆಸಬೇಕಾಯ್ತು.
ಅಷ್ಟಕ್ಕೂ ಧೋನಿ ಇಲ್ಲದಿದ್ರೆ ಸಿಎಸ್‍ಕೆ ತಂಡವೇ ಇಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಪಂದ್ಯ ಗೆಲ್ಲಲು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದ ಧೋನಿ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಯಾಕೆ ವಿಫಲರಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಒಂದಂತೂ ಸತ್ಯ.. ಸಿಎಸ್‍ಕೆ ತಂಡ ತನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಾ ಇಲ್ಲ. ಧೋನಿಯಂತೆ ಸುದೀರ್ಘ ನಾಯಕತ್ವ ನೀಡುವ ಯೋಚನೆಯನ್ನು ಕೂಡ ಮಾಡ್ತಾ ಇಲ್ಲ. ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿಕೊಳ್ಳುವ ಪರಿಪಾಠವನ್ನು ಸಿಎಸ್‍ಕೆ ಯಾಕೆ ಮಾಡ್ತಾ ಇದೆ. ಧೋನಿ ಬಿಟ್ಟು ತಂಡದಲ್ಲಿ ಬೇರೆ ಯಾರಿಗೂ ನಾಯಕತ್ವದ ಗುಣಗಳು ಇಲ್ವಾ..? ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದ ಧೋನಿ ಸಿಎಸ್‍ಕೆ ತಂಡದ ಭವಿಷ್ಯದ ಬಗ್ಗೆ ಯಾಕೆ ಯೋಚನೆ ಮಾಡ್ತಾ ಇಲ್ಲ…?
ಸನತ್ ರೈ

Related posts

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

August 4, 2026
ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

August 4, 2026
ShareTweetSendShare
Join us on:

Related Posts

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

by Shwetha
August 4, 2026
0

ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿರ್ಬಂಧ ಹೇರಿದ ಬಳಿಕ, ಇದೀಗ ರಾಜ್ಯದ...

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

by Shwetha
August 4, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ವಿವಿಧೆಡೆ...

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

by Shwetha
August 4, 2026
0

ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ವೀಕ್: ಆದಿಪುರುಷ್ ತಪ್ಪು ಮರುಕಳಿಸಿದರೆ ಸುಮ್ಮನಿರಲ್ಲ- ಯಶ್ ನಟನೆಯ ರಾಮಾಯಣ ಸಿನಿಮಾಗೆ ಎದುರಾಯ್ತು ಅಗ್ನಿಪರೀಕ್ಷೆ

ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ವೀಕ್: ಆದಿಪುರುಷ್ ತಪ್ಪು ಮರುಕಳಿಸಿದರೆ ಸುಮ್ಮನಿರಲ್ಲ- ಯಶ್ ನಟನೆಯ ರಾಮಾಯಣ ಸಿನಿಮಾಗೆ ಎದುರಾಯ್ತು ಅಗ್ನಿಪರೀಕ್ಷೆ

by Shwetha
August 4, 2026
0

ಮುಂಬೈ: ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಯೋಜನೆ ರಾಮಾಯಣ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಬರೋಬ್ಬರಿ...

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

by Shwetha
August 4, 2026
0

ಪಾಟ್ನಾ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಬಿಹಾರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಜೆಪಿಯ ಅಭೇದ್ಯ ಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram