ganapathi bappa
ಸ್ಯಾಂಡಲ್ ವುಡ್ ನಲ್ಲಿ ಹೊಸ ಚಿತ್ರವೊಂದು ಮೂಡಿಬಂದಿದ್ದು, ಈಗಾಗಲೇ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಎ ಎಂ ಫಿಲ್ಮ್ಸ್ ಅಂಡ್ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿ ಮೂಡಿಬರುತ್ತಿರುವ “ಗಣಪತಿ ಬಪ್ಪ” ಚಿತ್ರದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ.
ಈ ‘ಸಿನಿಮಾದ ಗಣಪತಿ ಬಪ್ಪ ಮೋರಿಯಾ’ ಟೈಟಲ್ ಸಾಂಗ್ ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹಾಡು ಕೇಳ್ತಿದ್ರೇನೆ ಮೈ ನವಿರೇಳುತ್ತೆ. ಅಂದ್ಹಾಗೆ ಪ್ರಯಾಶ್ ಮಜುಂದಾರ್ ಅವರ ಸಂಗೀತ ಚಿತ್ರಕ್ಕಿದೆ. ಆನಂದ್ ವತಾರ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಮಹೇಶ್ ಅರ್ಜುನ್ ನಾಯಕನಾಗಿದ್ರೆ, ಆರ್ ಪೂಜಾ ಅವರು ನಾಯಕಿಯಾಗಿ ಕಾಣಿಸಿಕೊಳ್ತಾಯಿದ್ದಾರೆ.
ರತ್ನನ್ ಪ್ರಪಂಚದಲ್ಲಿ ‘ ಇನ್ಶೂರೆನ್ಸ್ ಏಜೆಂಟ್ ರತ್ನಾಕರ’ನಾಗಿ ಬರಲಿದ್ದಾರೆ ಡಾಲಿ..!
ಇನ್ನೂ ಡಾ. ಕವೇತಿ ನಾಗೇಶ್ ಹಾಗೂ ಅಮಿತಾ ದೇಶ್ ಮುಖ್ ಅವರು ನೆಗೆಟಿವ್ ಶೇಡ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶ್ರೀಕಾಂತಯ್ಯ, ಸೂರ್ಯ ತೇಜ, ನಾಗರಾಜ್ ಆರ್ ಕೆ, ದಕ್ಷ ರಾಜ್ ಅವರು ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ಆನಂದ್ ವತಾರ್, ವೀನ್ ಸೆಂಟ್ ಅಮಲ್ ರಾಜ್ ಅವರ ಛಾಯಾಗ್ರಹಣವಿದೆ. ಸಿನಿಮಾಗೆ ಪಕ್ಕಾ ಆಕ್ಷನ್ ಹಾಗೂ ಫ್ಯಾಮಿಲಿ ಎಂಟರ್ ಟೈಮೆಂಟ್ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನ ಭರ್ಜರಿಯಾಗಿ ಮನರಂಜಿಸಲಿದೆ. ವಿಶೇಷ ಅಂದ್ರೆ ಚಿತ್ರದ ಶೂಟಿಂಗ್ ಲೊಕೇಶನ್ಸ್. ವಾರಣಾಸಿ, ಮುಧೋಳ್, ಮುಂಬೈ, ಪುಣೆ, ಉಡುಪಿ, ಯಾದಗಿರಿ , ಗುಲಬರ್ಗ ಹೀಗೆ ಅನೇಕ ಆಕರ್ಶಣೀಯ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.
ganapathi bappa
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








