ganesh
ಹಲವು ದಿನಗಳಿಂದ ಹರಿಪ್ರಿಯಾ ಹಾಗೂ ದಿಗಂತ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿತ್ತು. ಇದೀಗ ಈ ವಿಚಾರ ಖಚಿತವಾಗಿದ್ದು, ಈಗಾಗಲೇ ಸಿನಿಮಾ ಸೆಟ್ಟೇರಿದೆ.
ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಕೂಡ ನೆರವೇರಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದ್ದರು.
ಈ ಸಿನಿಮಾ ತೆಲುಗಿನ ‘ಎವರು’ ಚಿತ್ರದ ಕನ್ನಡ ರೀಮೇಕ್ ಎಂದು ಹೇಳಲಾಗಿದೆ.
ತೆಲುಗಿನಲ್ಲಿ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಕಿಚ್ಚ ಸುದೀಪ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ..!
ಈ ಪಾತ್ರಗಳನ್ನು ಕನ್ನಡದಲ್ಲಿ ದಿಗಂತ್, ಹರಿಪ್ರಿಯಾ, ಪ್ರಭು ಮಂಡ್ಕರ್ ಹಾಗೂ ವಸಿಷ್ಠ ಸಿಂಹ ನಿರ್ವಹಿಸಲಿದ್ದಾರೆ.
‘ಎವರು’ ಸಿನಿಮಾ ಸ್ಪಾನಿಶ್‌ನ ‘ದಿ ಇನ್ವಿಸಿಬಲ್ ಗೋಸ್ಟ್’ ಎಂಬ ಚಿತ್ರದ ರೀಮೇಕ್.
ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಮಹಿಳೆಯ ಮೇಲಿನ ಅತ್ಯಾಚಾರ, ಅದರ ಸುತ್ತಲಿನ ತನಿಖೆ, ಆ ಮಹಿಳೆ ಹೇಗೆ ರಿವೇಂಜ್ ತೀರಿಸಿಕೊಖಳ್ಳಲಿದ್ದಾಳೆ ಎಂಬ ಕಥೆ ಹೊಂದಿದೆ.
ಕನ್ನಡದಲ್ಲಿ ರೀಮೇಕ್ ಆಗುತ್ತಿರುವ ಚಿತ್ರಕ್ಕೆ ಅಶೋಕ್ ತೇಜ ಅವರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ.
ಇನ್ನೂ ತೆಲುಗಿನಲ್ಲಿ ಹಿಟ್ ಆಗಿದ್ದ ಈ ಚಿತ್ರಕ್ಕೆ ಕನ್ನಡದಲ್ಲಿ ಯಾವ ಟೈಟಲ್ ಇಡಬಹುದು ಎಂಬುದು ಇನ್ನೂವರೆಗೂ ರಿವೀಲ್ ಆಗಿಲ್ಲ..
ganesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








