Rain | ಬಳ್ಳಾರಿಯಲ್ಲಿ ಮಳೆ : ದೇವರನ್ನು ಬಿಡದ ವರುಣ
ಗಣಿ ನಾಡು ಬಳ್ಳಾರಿಯಲ್ಲಿ ವಿಘ್ನ ವಿನಾಶಕನಿಗೆ ವರುಣ ದೇವ ಅಡ್ಡಿಯಾಗಿದ್ದಾನೆ.
ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಗಣೇಶ ಮೂರ್ತಿ ತಯಾರಕರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ರಾತ್ರಿ ಸುರಿದ ಮಳೆಗೆ ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಬಳ್ಳಾರಿಯಲ್ಲಿ ಗಣೇಶನ ಮೂರ್ತಿಗಳೇ ಮುಳುಗಿ ಹೋಗಿವೆ.

ಕಲ್ಕತ್ತ ಮೂಲದ ಮೂರ್ತಿ ತಯಾರಕರು ಗಣೇಶ ಹಬ್ಬಕ್ಕಾಗಿ ನೂರಾರು ಮೂರ್ತಿ ತಯಾರಿಸಿದರು.
ಆದರೆ ನಿನ್ನೆ ತಡರಾತ್ರಿ ಸುರಿದ ಮಳೆ ಹಿನ್ನಲೆ ತಾತ್ಕಾಲಿಕ ಟೆಂಟ್ನಲ್ಲಿ ನೀರು ನುಗ್ಗಿದೆ.
ಪರಿಣಾಮ ನಿರ್ಮಾಣ ಮಾಡಿದ ನೂರಕ್ಕೂ ಹೆಚ್ಚು ಮೂರ್ತಿಗಳು ಅರ್ಧ ಭಾಗ ಮುಳುಗಿ ಹೋಗಿವೆ.








