ಮದುವೆಗೆ ನಿರಾಕರಿಸಿದ ಯುವತಿಯ ಮೇಲೆ ನಿರಂತರ 8 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ
22 ವರ್ಷದ ಯುವತಿಯೊಬ್ಬಳು ಮದುವೆಗೆ ನಿರಾಕರಿಸಿದಕ್ಕೆ ಆಕೆಯನ್ನ ಅಪಹರಿಸಿ ಸತತ 8 ತಿಂಗಳ ಕಾಲ ಗೃಹಬಂಧನಲ್ಲಿಟ್ಟು ನಿರಂತರವಾಗಿ ಸಾಮೂಹುಕಿ ಅತ್ಯಚಾರವೆಸಗಿರುವ ಘಟನೆ ಪಂಜಾಬ್ನ ಬರ್ನಾಲಾದಲ್ಲಿ ನಡೆದಿದೆ. ಈ ನೀಚ ಕೃತ್ಯದಲ್ಲಿ ರಕ್ಷಕನಾಗಬೇಕಿದ್ದ ಪೊಲೀಸರು ಹಾಗೂ ದೇವರ ಪೂಜೆ ಮಾಡುವ ಅರ್ಚಕನೂ ಭಾಗಿಯಾಗಿರೋದು ನಾಚಿಕೆಗೇಡಿನ ಸಂಗತಿಯಾಗಿದೆ.
2020ರ ಜೂನ್ ನಲ್ಲಿ ಯುವತಿ ಮಾರ್ಕೆಟ್ ಗೆ ಹೋಗಿದ್ದ ವೇಳೆ ಆಕೆಗೆ ಪರಿಚಯವಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಪಾನೀಯದಲ್ಲಿ ಮಾದಕ ವಸ್ತು ಹಾಕಿ ಕೊಟ್ಟಿದ್ದಾರೆ. ಇದನ್ನು ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದು, ಎಚ್ಚರವಾಗುವಷ್ಟರಲ್ಲಿ ಆಕೆಯನ್ನು ಮದುವೆಯಾಗಲು ಬಯಸಿದ್ದ ಯುವಕನ ಮನೆಯಲ್ಲಿದ್ದಳು ಎನ್ನಲಾಗಿದೆ.
ಅನ್ಯಕೋಮಿನ ಬಾಲಕಿಯನ್ನ ಪ್ರೀತಿ ಮಾಡಿದಕ್ಕೆ ಬಾಲಕನ ಮರ್ಮಾಂಗ ಕತ್ತರಿಸಿದ ಕಿಡಿಗೇಡಿಗಳು..!
ಆತ ಹಾಗೂ ಆತನ ಸ್ನೇಹಿತರಾದ 6 ಜನರು ಸತತ 8 ತಿಂಗಳುಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇಂತಹ ಹೀನ ಕೃತ್ಯದಲ್ಲಿ ಪೊಲೀಸರು, ದೇವಸ್ಥಾನದ ಅರ್ಚಕನೂ ಭಾಗಿಯಾಗಿದ್ದು ತಮ್ಮ ವೃತ್ತಿಗೆ ಅಪಮಾನ ಮಾಡಿದ್ದಾರೆ. ಅಗೌರವ ತೋರಿದ್ದಾರೆ. ಇನ್ನೂ ಈ ನೀಚರ ಕಪಿಮುಷ್ಠಿಯಿಂದ ಇತ್ತೀಚೆಗೆ ಯುವತಿ ತಪ್ಪಿಸಿಕೊಂಡು ಬಂದಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಮಹಿಳೆ ಸೇರಿ 7 ಮಂದಿ ಆರೋಪಿಗಳನ್ನು ಬರ್ನಾಲಾ ಪೊಲೀಸರು ಬಂಧಿಸಿದ್ದಾರೆ. ಸದ್ಯ ಅತ್ಯಾಚಾರ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಅಮಾನತು ಮಾಡಲಾಗಿದೆ.