‘ಸೆಕ್ಸ್ ವರ್ಕರ’ನ್ನು ರೂಮ್ ಗೆ ಕಳುಹಿಸಲಿಲ್ಲ ಅಂತ ಈ ನೀಚರು ಮಾಡಿದ್ದೇನು..!
ಜೈಪುರ : ಸೆಕ್ಸ್ ವರ್ಕರನ್ನು ರೂಮ್ ಗೆ ಕಳುಹಿಸಲಿಲ್ಲ ಅನ್ನೋ ಕಾರಣಕ್ಕೆ ಐವರು ದುಷ್ಕರ್ಮಿಗಳು ಮಾಡಿದ್ದೇನು ಗೊತ್ತಾ… ರಾಜಸ್ಥಾನದ ನೀಮ್ರಾನಾದಲ್ಲಿನ ತ್ರಿ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಐವರು , ಕಾಲ್ ಗರ್ಲ್ ಬೇಕು, ರೂಂಗೆ ಕಳಿಸಿ ಅಂತ ಹೋಟೆಲ್ ನವರಿಗೆ ದಬಾಯಿಸಿದ್ದಾರೆ. ಆದರೆ ಹೋಟೆಲ್ ಸಿಬ್ಬಂದಿ ಇದಕ್ಕೆಲ್ಲ ಇಲ್ಲಿ ಅವಕಾಶವಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಹೊಟೆಲ್ ನ ಮಹಿಳಾ ಸಿಬ್ಬಂದಿಗಳ ಮೇಲೆ ಅತ್ಯಚಾರವೆಸಗಿದ್ದಾರೆ.
ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತ್ನ ಜಾಮ್ನಗರದಲ್ಲಿ ತಲೆಎತ್ತಲಿದೆ: ಅಂಬಾನಿಯ ಕನಸಿನ ಪ್ರಾಜೆಕ್ಟ್
ಹೌದು.. ಅದ್ಯಾವಾಗ ಆಫೀಸ್ ಬಾಯ್ ಈ ನೀಚರ ಮಾತು ಕೇಳಲಿಲ್ಲವೋ ಆಗ ಸಿಟ್ಟಿಗೆದ್ದಿರುವ ಕಾಮುಕರು ಹೋಟೆಲ್ ನ ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಮಹಿಳಾ ಸಿಬ್ಬಂದಿಗಳ ಮೇಲೆ ಅತ್ಯಚಾರವೆಸಗಿದ್ದಾರೆ. ರೂಮ್ ನ ಒಳಗಡೆ ಇಬ್ಬರು ಇದ್ದರೆ, ಮೂವರು ರೂಮ್ ನ ಹೊರಗೆ ಕಾವಲು ಕಾಯುತ್ತಿದ್ದರು. ಅಷ್ಟರಲ್ಲಿ ಮ್ಯಾನೇಜರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಐವರನ್ನೂ ಅರೆಸ್ಟ್ ಮಾಡಿ ಜೈಲಿಗೆ ಎಳೆದೊಯ್ದಿದ್ದಾರೆ. ಬಳಿಕ ವಿಚಾರಣೆ ವೇಳೆ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ಅದೇನೆಂದ್ರೆ ಈ ಐವರು ಉದ್ಯಮಿಯೊಬ್ಬರು ಹತ್ಯೆಗೂ ಸ್ಕೆಚ್ ಹಾಕಿದ್ದರಂತೆ. ಅದೇ ಸಲುವಾಗಿ ಹೋಟೆಲ್ ನಲ್ಲಿ ಸ್ಟೇ ಆಗಿದ್ದರು ಎನ್ನಲಾಗಿದೆ. ಇನ್ನೂ ಬಂಧಿತರನ್ನ ನರೇಶ್ ಗುಜ್ಜರ್, ಪ್ರಿನ್ಸ್ ತಿವಾರಿ, ಲೋಕೇಶ್, ರಾಹುಲ್, ದನ್ವೀರ್ ಎಂದು ಗುರುತಿಸಲಾಗಿದೆ.
ವಿದೇಶಿ ಪ್ರವಾಸಿಗರಿಗೆ ಒಮಾನ್ ಸರ್ಕಾರ ಬಂಪರ್ ಆಫರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel