Crime: ಯುವ ಗಾಯಕಿ ಮೇಲೆ ಅತ್ಯಾಚಾರ | ಮೂವರು ಆರೋಪಿಗಳ ಬಂಧನ

1 min read
Crime Saaksha Tv

ಯುವ ಗಾಯಕಿ ಮೇಲೆ ಅತ್ಯಾಚಾರ | ಮೂವರು ಆರೋಪಿಗಳ ಬಂಧನ

ಬಿಹಾರ : ಗಾಯಕಿ ಮೇಲೆ ಕಾಮಾಂಧ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದ ರಾಮಕೃಷ್ಣ ನಗರದಲ್ಲಿ ನಡೆದಿದೆ.

ಜಹಾನಾಬಾದ್ ಜಿಲ್ಲೆಯವರಾದ ಯುವತಿ (ಗಾಯಕಿ) ಮೇಲೆ ಪಿಂಟು ಕುಮಾರ್, ಸಂಜೀವ್ ಕುಮಾರ್ ಮತ್ತು ಕರುಕುಮಾರ್ ಅತ್ಯಾಚಾರವೆಸಗಿರುವ ಆರೋಪಿಗಳು.

ನಡೆದಿದ್ಧೇನು?: ಯುವತಿಯ ಹೇಳಿಕೆ ಪ್ರಕಾರ ಮದುವೆ ಕಾರ್ಯಕ್ರಮದಲ್ಲಿ ಹಾಡಲು ಎಂಬುವರು ಪಿಂಟು ಕುಮಾರ್, ಸಂಜೀವ್ ಕುಮಾರ್ ಮತ್ತು ಕರುಕುಮಾರ್  ಬುಕ್ ಮಾಡಿದ್ದರು. ಆ ಮೂವರು ಹೇಳಿದ್ದ ಸ್ಥಳಕ್ಕೆ ನಾನು ತೆರಳಿದಾಗ ಅಲ್ಲಿ ಯಾವುದೇ ವಿವಾಹ ಕಾರ್ಯಕ್ರಮವಿರಲಿಲ್ಲ.

ಆದ್ದರಿಂದ ವಾಪಸ್ ಹಿಂದಿರುಗಲು ಮುಂದಾದೆ. ಆಗ ಬಂದೂಕು ತೋರಿಸಿ, ಕೋಣೆಯೊಂದಕ್ಕೆ ಕರೆದೊಯ್ದ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದರು. ಅತ್ಯಾಚಾರದ ಘಟನೆಯನ್ನು ಮೊಬೈಲ್​ನಲ್ಲಿ ಸೆರೆಹಿಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಾನು ಹೇಗೋ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಮತ್ತೊಂದು ಕೋಣೆಗೆ ತೆರಳಿ ಒಳಗಿನಿಂದ ಬೀಗ ಹಾಕಿಕೊಂಡೆ.ನಂತರ ಪೊಲೀಸರಿಗೆ ಕರೆ ಮಾಡಿದೆ ಎಂದು ಯುವತಿ ಹೇಳಿಕೊಂಡಿದ್ದಾರೆ.

ನಾವು ತಕ್ಷಣ ಅಪರಾಧ ಸ್ಥಳಕ್ಕೆ ತಲುಪಿ ಸಂತ್ರಸ್ತೆಯನ್ನು ರಕ್ಷಿಸಿದ್ದೇವೆ. ಈ ಸಂಬಂಧ ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಅವರಿಂದ ಮೂರು ಕಾಟ್ರಿಡ್ಜ್​ಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ರಾಮಕೃಷ್ಣ ನಗರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ರವಿ ರಂಜನ್ ಮಾಹಿತಿ ನೀಡಿದರು.

ತನಿಖೆಯ ವೇಳೆ ಪಿಂಟುಕುಮಾರ್ ಸಂತ್ರಸ್ತೆಗೆ ಪರಿಚಿತನಾಗಿದ್ದ ಎಂದು ತಿಳಿದು ಬಂದಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಐಪಿಸಿಯ 376 ಡಿ (ಗ್ಯಾಂಗ್ ರೇಪ್) ಮತ್ತು 34 (ಕ್ರಿಮಿನಲ್ ಪಿತೂರಿ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್​​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd