Crime : ತನ್ನ ಮದುವೆಯ ಲಗ್ನ ಪತ್ರಿಕೆ ಹಂಚಲು ಹೋಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

1 min read

Crime : ತನ್ನ ಮದುವೆಯ ಲಗ್ನ ಪತ್ರಿಕೆ ಹಂಚಲು ಹೋಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ತನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಯುವತಿಯನ್ನ ಅಪಹರಿಸಿರುವ ಪಾಪಿಗಳು ನಾನಾ ಸ್ಥಳಗಳಲ್ಲಿ ಆಕೆಯನ್ನ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರವೆಗಿರುವ ಘಟನೆ  ಮಧ್ಯಪ್ರದೇಶದಲ್ಲಿ ನಡೆದಿದೆ..

ಆಕೆಯನ್ನು ಅಪಹರಿಸಿದ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರಗೈದು ಅವಳನ್ನು ಮಾರಾಟ ಮಾಡಿದ್ದಾರೆ. ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏಪ್ರಿಲ್ 21 ರಂದು ನಡೆಯಲಿರುವ ಆಕೆಯ ಮದುವೆಯ ಕಾರ್ಡ್‍ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಏಪ್ರಿಲ್ 18 ರಂದು ಅವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೇ ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದು ಅವರೊಂದಿಗೆ ಇರಿಸಿದಲ್ಲದೇ ಬಳಿಕ ಆಕೆಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿದ್ದರು ಎಂದು ಯುವತಿಯು ಪೊಲೀಸರಿಗೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ..

ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದಾರೆ. ಆತನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಾರೆ. ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಯುವತಿಯು ಹೇಗೋ ತನ್ನ ತಂದೆಯನ್ನು ಸಂಪರ್ಕಿಸಿದ್ದಾಳೆ..    ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪಠಾರಿ ಗ್ರಾಮದಿಂದ ರಕ್ಷಿಸಲಾಗಿದೆ.. ಸಂತ್ರಸ್ತೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಕೆಲವರ ವಿರುದ್ಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣಗಳನ್ನ ದಾಖಲಿಸಲಾಗಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd