ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಬರೋದು ಪಕ್ಕಾ
ಟೀಂ ಇಂಡಿಯಾ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಸದ್ಯ ಸೂಪರ್ ಫಾರ್ಮ್ ನಲ್ಲಿದ್ದಾರೆ.
ಐಪಿಎಲ್ 2022 ರಲ್ಲಿ ಆರ್ಸಿಬಿಯನ್ನು ಪ್ರತಿನಿಧಿಸುತ್ತಿರುವ ಕಾರ್ತಿಕ್ ಫಿನಿಶರ್ ಆಗಿ ಮಿಂಚುತ್ತಿದ್ದಾರೆ.
ಇದುವರೆಗೆ ಆರು ಇನ್ನಿಂಗ್ಸ್ಗಳಲ್ಲಿ ಐದು ಬಾರಿ ಅಜೇಯರಾಗಿರುವ ಕಾರ್ತಿಕ್ ಕ್ರಮವಾಗಿ 32 *, 14 *, 44 *, 7,34 *, 66 * ರನ್ ಗಳಿಸಿದ್ದಾರೆ.
ಸದ್ಯದ ದಿನೇಶ್ ಪ್ರದರ್ಶನದ ಬಗ್ಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಕಾರ್ತಿಕ್ ಸ್ಥಾನ ಪಡೆಯುವುದು ನಿಶ್ಚಿತ, ಅವರು ಟೀಂ ಇಂಡಿಯಾಗೆ ಉತ್ತಮ ಫಿನಿಶರ್ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಇಂಗಿತವನ್ನು ಕಾರ್ತಿಕ್ ಈಗಾಗಲೇ ಬಹಿರಂಗಪಡಿಸಿದ್ದಾರೆ.
ಅವರ ಆಸೆ ಖಂಡಿತ ಈಡೇರುತ್ತದೆ. ಈಗ ವಯಸ್ಸು ಮುಖ್ಯವಲ್ಲ.. ಫಿಟ್ನೆಸ್ ಮೂಖ್ಯ.. ಆಟ ಹೇಗಿದೆ ಎಂಬುದನ್ನು ನೋಡುವುದೇ ಮುಖ್ಯ.
ನೀವು ಫಿಟ್ ಆಗಿದ್ದರೆ ಮತ್ತು ಫಾರ್ಮ್ನಲ್ಲಿದ್ದರೆ, ವಯಸ್ಸಿನ ಹೊರತಾಗಿಯೂ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಬಹುದು.
ಹಾಗಾಗಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಕಾರ್ತಿಕ್ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಲಿದ್ದಾರೆ.
ಕಾರ್ತಿಕ್ ಆರು ಮತ್ತು ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ, ಅವರು ಉತ್ತಮ ಫಿನಿಶರ್ ಆಗುವುದು ಖಚಿತ, ”ಎಂದಿದ್ದಾರೆ. gavaskar-says-dinesh-karthik-play-finisher-role-india