ADVERTISEMENT
Thursday, April 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗ್ಲೇನ್ ಮ್ಯಾಕ್ಸ್ ವೆಲ್ ವಿರುದ್ಧ ಕಿಡಿಕಾರಿದ ವೀರೇಂದ್ರ ಸೆಹ್ವಾಗ್

admin by admin
December 11, 2020
in Newsbeat, Sports, ಕ್ರೀಡೆ
Virender Sehwag Glenn Maxwell saakshatv
Share on FacebookShare on TwitterShare on WhatsappShare on Telegram

Related posts

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

April 30, 2026
ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

April 30, 2026

Virender Sehwag  Glenn Maxwell saakshatvವೀರೇಂದ್ರ ಸೆಹ್ವಾಗ್…ಟೀಮ್ ಇಂಡಿಯಾದ ಮಾಜಿ ಆಟಗಾರ. ಹೊಡಿ ಬಡಿ ಆಟದ ಮೂಲಕವೇ ಸೆಹ್ವಾಗ್ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.
ಕ್ರಿಕೆಟ್ ಗೆ ನಿವೃತ್ತಿಯಾದ ನಂತರ ಸೆಹ್ವಾಗ್ ತನ್ನ ಆಟದಂತೆ ನೇರ ನಡೆ ನುಡಿಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.
ಮನಸ್ಸಿನಲ್ಲಿ ಏನು ಇದೆಯೋ ಅದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಸೆಹ್ವಾಗ್ ಅವರದ್ದು. ಇದೀಗ ಸೆಹ್ವಾಗ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೌದು, ವೀರೇಂದ್ರ ಸೆಹ್ವಾಗ್ ಈ ಬಾರಿ ತರಾಟೆಗೆ ತೆಗೆದುಕೊಂಡಿದ್ದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್.
ಗ್ಲೇನ್ ಮ್ಯಾಕ್ಸ್ ವೆಲ್ ಇತ್ತೀಚಿಗೆ ಮುಕ್ತಾಯವಾದ ಟೀಮ್ ಇಂಡಿಯಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿಯಲ್ಲಿ ಆಡಿದ ರೀತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಅದೇ ಗ್ಲೇನ್ ಮ್ಯಾಕ್ಸ್ ವೆಲ್ ಕಳೆದ ತಿಂಗಳು ಮುಕ್ತಾಯವಾದ ಐಪಿಎಲ್ ನಲ್ಲಿ ಯಾವ ರೀತಿ ಕೆಟ್ಟ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು ಎಂಬುದು ಸಹ ಗೊತ್ತಿರುವ ಸಂಗತಿಯೇ.
ಆದ್ರೆ ಸೆಹ್ವಾಗ್ ಈಗ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಬದ್ಧತೆಯನ್ನೇ ಪ್ರಶ್ನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗ್ಲೇನ್ ಮ್ಯಾಕ್ಸ್ ವೆಲ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಯಾಕೆ ಕಳಪೆ ಪ್ರದರ್ಶನ ನೀಡಿರುವುದು ಅನ್ನೋದು ಸೆಹ್ವಾಗ್ ಪ್ರಶ್ನೆಯಾಗಿದೆ.
 Glenn Maxwell saakshatvಅಷ್ಟೇ ಅಲ್ಲ, ಸೆಹ್ವಾಗ್, ಗ್ಲೇನ್ ಮ್ಯಾಕ್ಸ್ ವೆಲ್ ಅವರ ವ್ಯಕ್ತಿತ್ವವನ್ನು ಕೂಡ ಪ್ರಶ್ನೆ ಮಾಡಿದ್ದಾರೆ. ಕಿಂಗ್ ಇಲೆವೆನ್ ಪಂಜಾಬ್ ತಂಡದ ಕೋಚ್ ಕೂಡ ಆಗಿದ್ದ ಸೆಹ್ವಾಗ್, ಮ್ಯಾಕ್ಸ್ ವೆಲ್ ಮಾಡುತ್ತಿದ್ದ ಕಿತಾಪತಿಗಳನ್ನು ಕೂಡ ಬಹಿರಂಗಪಡಿಸಿದ್ದಾರೆ.
ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಆಡಿರುವ 13 ಪಂದ್ಯಗಳಲ್ಲಿ ಗಳಿಸಿದ್ದು 108 ರನ್. ಇದ್ರಲ್ಲಿ ಒಂದೇ ಒಂದು ಸಿಕ್ಸರ್ ಇರಲಿಲ್ಲ. ಅಷ್ಟೇ ಅಲ್ಲ ಕೇವಲ 9 ಬೌಂಡರಿಗಳನ್ನು ಮಾತ್ರ ಸಿಡಿಸಿದ್ದಾರೆ.
ಆದ್ರೆ ಟೀಮ್ ಇಂಡಿಯಾದ ವಿರುದ್ಧ ಗ್ಲೇನ್ ಮ್ಯಾಕ್ಸ್ ವೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ 19 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 45 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 29 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಮತ್ತು ಬೌಂಡರಿಗಳ ನೆರವಿನಿಂದ 73 ರನ್ ದಾಖಲಿಸಿದ್ದರು. ಮೂರನೇ ಏಕದಿನ ಪಂದ್ಯದಲ್ಲೂ ಬಿರುಸಿನನ 59 ರನ್ ದಾಖಲಿಸಿದ್ದರು. ಇನ್ನು ಟಿ-ಟ್ವೆಂಟಿ ಪಂದ್ಯಗಳಲ್ಲಿ 78 ರನ್ ಪೇರಿಸಿದ್ದರು.
ಇದನ್ನೇ ಪ್ರಶ್ನೆ ಮಾಡಿದ್ದ ಸೆಹ್ವಾಗ್, ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಎಂಜಾಯ್ ಮಾಡುತ್ತಿದ್ದ. ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ರಿಸ್ಕ್ ಅಥವಾ ಒತ್ತಡವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ರೂ ರನ್ ಮಾತ್ರ ದಾಖಲಿಸುತ್ತಿರಲಿಲ್ಲ ಎಂದು ಸೆಹ್ವಾಗ್ ಮ್ಯಾಕ್ಸ್ ವೆಲ್ ವಿರುದ್ಧ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ, ಆಟದ ಮುಗಿದ ನಂತರ ಉಚಿತವಾಗಿ ಸಿಗುತ್ತಿದ್ದ ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದ. ಜೊತೆಗೆ ರೂಮ್ ಗೆ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದ. ಇದು ಐಪಿಎಲ್ ನಲ್ಲಿ ಗ್ಲೇಮ್ ಮ್ಯಾಕ್ಸ್ ವೆಲ್ ಅವರ ಕಾಯಕವಾಗಿತ್ತು ಅಂತ ಸೆಹ್ವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸೆಹ್ವಾಗ್ ಗ್ಲೇನ್ ಮ್ಯಾಕ್ಸ್ ವೆಲ್ ಆಟವನ್ನೇ ಪ್ರಶ್ನೆ ಮಾಡಿದ್ದಾರೆ.

Tags: #saakshatvaustreliaGlenn MaxwellIPLIPL 2020kings 11 punjabKL RahuLteam indiaVirender Sehwa
ShareTweetSendShare
Join us on:

Related Posts

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

by Shwetha
April 30, 2026
0

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವಾದ ಬೆಂಗಳೂರು ಮಿಲ್ಕ್ ಯುನಿಯನ್ ಲಿಮಿಟೆಡ್ (ಬಮೂಲ್) ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ ನಡುವೆ ಮಹತ್ವದ ಒಪ್ಪಂದ ಕೈಗೊಳ್ಳಲಾಗಿದೆ. ಈ ಒಪ್ಪಂದದ ಪ್ರಕಾರ,...

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

by Shwetha
April 30, 2026
0

ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದಕ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಒಪೆಕ್ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಈ ಮಹತ್ವದ ನಿರ್ಧಾರ ಮೇ 1ರಿಂದ ಜಾರಿಗೆ...

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60  ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

by Shwetha
April 30, 2026
0

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಇದೀಗ ಬಂಪರ್ ಅವಕಾಶ ಎದುರಾಗಿದೆ. ದೇಶದ ಕೇಂದ್ರ ಬ್ಯಾಂಕ್ ಆಗಿರುವ...

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

by Shwetha
April 30, 2026
0

ಮಳೆರಾಯನ ಆರ್ಭಟಕ್ಕೆ ನಲುಗಿದ ಸಿಲಿಕಾನ್ ಸಿಟಿ ಶಿವಾಜಿನಗರದಲ್ಲಿ ಸಂಭವಿಸಿತು ಘನಘೋರ ದುರಂತ ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆ ಭಾರಿ ಅವಾಂತರವನ್ನೇ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 30, 2026
0

ದಿನ ಭವಿಷ್ಯ : 30-04-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಅತ್ಯಂತ ಸಕ್ರಿಯವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸವು ಶಿಖರದಲ್ಲಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ವ್ಯಾಪಾರಸ್ಥರಿಗೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram