Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • Samagra karnataka
    • State
    • Hale Mysore
    • Coastal Karnataka
    • Malenadu Karnataka
    • Kalyana karnataka
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • More
    • IPL 2020
    • IPL 2021
    • Health
    • Saaksha Special
    • Marjala Manthana
    • Life Style
    • Cooking
    • Bigg Boss 8
    • Viral News
    • GALLERY
    • TECHNOLOGY
No Result
View All Result
Home Health

Minister Dr. K. Sudhakar | 2025 ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ

Mahesh M Dhandu by Mahesh M Dhandu
July 16, 2022
in Health, Newsbeat, ಆರೋಗ್ಯ
0
Goal of malaria free Karnataka by 2025 saaksha tv

Goal of malaria free Karnataka by 2025 saaksha tv

0
SHARES
0
VIEWS
Share on FacebookShare on TwitterShare on WhatsappShare on Telegram

Minister Dr. K. Sudhakar | 2025 ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ

ಬೆಂಗಳೂರು : ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದು ಕೂಡ ಅವಶ್ಯಕ. ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಜನರೇ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು.

Related posts

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022
Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

August 13, 2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ, 2025 ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ಮಾಡುವ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವರು, ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆಯೇ ಇರಲಿಲ್ಲ. ಇದರಿಂದಾಗಿ ಸಾವುಗಳು ಸಂಭವಿಸುತ್ತಿತ್ತು. 80, 90 ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಈ ರೀತಿ ಸರ್ಕಾರ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ ಎಂದರು.

ಮಲೇರಿಯಾ, ಡೆಂಘೀ ಮೊದಲಾದ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಅಂತಹ ಕಡೆಗಳಲ್ಲಿ ಸ್ವಾಭಾವಿಕವಾಗಿ ಮಳೆ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ದೇಶದಲ್ಲಿ 2020 ರಲ್ಲಿ 1,86,532 ಮಲೇರಿಯಾ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಕರ್ನಾಟಕದಲ್ಲಿ 1,701 ಪ್ರಕರಣಗಳು ವರದಿಯಾಗಿದ್ದವು. ಅಂದರೆ ರಾಜ್ಯದ ಪಾಲು ಶೇ.0.9 ಆಗಿತ್ತು. ಇದೇ ವರ್ಷ ಜಗತ್ತಿನಲ್ಲಿ 21 ಕೋಟಿ ಜನರು ಮಲೇರಿಯಾ ರೋಗಕ್ಕೊಳಗಾಗಿದ್ದು, 6.27 ಲಕ್ಷ ರೋಗಿಗಳು ಮೃತಪಟ್ಟಿದ್ದರು. ರಾಜ್ಯದಲ್ಲಿ ಮಲೇರಿಯಾ ನಿಯಂತ್ರಣದಲ್ಲಿದ್ದು, ಇದಕ್ಕಾಗಿ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದರು.

Goal of malaria free Karnataka by 2025 saaksha tv
Goal of malaria free Karnataka by 2025 saaksha tv

ಮಲೇರಿಯಾ ರೋಗವನ್ನು ಸಾಧಾರಣ ರೋಗ ಎಂದು ಪರಿಗಣಿಸುವಂತಿಲ್ಲ. ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 100 ಪ್ರಕರಣ ಮಾತ್ರ ವರದಿಯಾಗಿದೆ. ಈ ಮಳೆಗಾಲವು ಅತ್ಯಂತ ಸವಾಲಿನ ಅವಧಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚು ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಿಸಿದಾಗ ಮಾತ್ರ ಇದು ಸಾಧ್ಯ. ಮಲೇರಿಯಾ ಮಾತ್ರವಲ್ಲದೆ, ಕ್ಷಯ ರೋಗವನ್ನು ಕೂಡ ನಿರ್ಮೂಲನೆ ಮಾಡಬೇಕಿದೆ. ಮಲೇರಿಯಾ ನಿರ್ಮೂಲನೆಗೆ 2030 ರ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ 2025 ರ ಗುರಿ ಇರಿಸಿಕೊಳ್ಳಲಾಗಿದೆ. ಸರ್ಕಾರದ ಕೆಲಸ, ಸಂಘ, ಸಂಸ್ಥೆಗಳ ನೆರವು ಹಾಗೂ ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ. ಪ್ರತಿ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.

ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೇರಿಯಾ ಹೆಚ್ಚಿರುವ ಕಡೆಗಳಿಗೆ ಹೋಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರ್ಮೂಲನೆ ಮಾಡಿದರೆ ಮಾತ್ರ ಸಾಲುವುದಿಲ್ಲ. ಅದು ಮತ್ತೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಪ್ರಕರಣ ಕಂಡುಬಂದಿಲ್ಲ ಎಂದಾಕ್ಷಣ, ಅಲ್ಲಿ ರೋಗ ಇಲ್ಲ ಎಂದು ಭಾವಿಸಬಾರದು. ಸಾಮೂಹಿಕ ಪ್ರಯತ್ನ, ಸಂಘಟಿತ ಕಾರ್ಯದ ಮೂಲಕ ಮಲೇರಿಯಾ ನಿರ್ಮೂಲನೆ ಕಾರ್ಯ ನಡೆಯಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

Tags: #Saaksha TVDr. K SudhakarkarnatakaMalaria
ShareTweetSendShare

Related Posts

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

by Mahesh M Dhandu
August 13, 2022
0

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ ಶಿವಮೊಗ್ಗ  : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ...

Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

by Mahesh M Dhandu
August 13, 2022
0

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ ಹರ್ ಘರ್ ತಿರಂಗಾ ಅಭಿಯಾನ ಶುರು ಮನೆ ಮನೆಯಲ್ಲೂ ತಿರಂಗಾ ಹಾರಾಟ ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು...

National Herald case:  3ನೇ ಸುತ್ತಿನ ವಿಚಾರಣೆ ED  ಮುಂದೆ ಹಾಜರಾದ ಸೋನಿಯಾ ಗಾಂಧಿ…

Sonia Gandhi – 2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ

by Naveen Kumar B C
August 13, 2022
0

2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿದೆ. ಪಕ್ಷದ ಪ್ರಧಾನ...

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

by Naveen Kumar B C
August 13, 2022
0

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ… ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ತ್ರಿವರ್ಣ...

Climate Change – ಅಂಟಾರ್ಕ್ಟಿಕಾದಲ್ಲಿ ಕರಗಿದೆ 12 ಟ್ರಿಲಿಯನ್ ಟನ್ ಐಸ್

Climate Change – ಅಂಟಾರ್ಕ್ಟಿಕಾದಲ್ಲಿ ಕರಗಿದೆ 12 ಟ್ರಿಲಿಯನ್ ಟನ್ ಐಸ್

by Naveen Kumar B C
August 13, 2022
0

Climate Change – ಅಂಟಾರ್ಕ್ಟಿಕಾದಲ್ಲಿ ಕರಗಿದೆ 12 ಟ್ರಿಲಿಯನ್ ಟನ್ ಐಸ್ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಮೂಲೆ ಮೂಲೆಯೂ ಪ್ರಭಾವಕ್ಕೆ ಒಳಗಾಗುತ್ತಿದೆ.   ಇತ್ತೀಚೆಗೆ, ವಿಜ್ಞಾನಿಗಳು ಅಂಟಾರ್ಕ್ಟಿಕಾದಲ್ಲಿ ನಡೆಯುತ್ತಿರುವ...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022
Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram