ಪಣಜಿ: ಇತ್ತೀಚೆಗೆ ದೇಶದಲ್ಲಿ ಗೋಬಿ ಮಂಚೂರಿ(Gobi Manchurian) ತಿಂಡಿಯನ್ನು ಹೆಚ್ಚಿನ ಜನ ಇಷ್ಟ ಪಡುತ್ತಾರೆ. ಆದರೆ, ಗೋವಾ (Goa) ನಗರದ ಮಾಪುಸಾದಲ್ಲಿ (Mapusa) ಈ ಆಹಾರ ಪದಾರ್ಥ ನಿಷೇಧಿಸಲಾಗಿದೆ.
ಚಿಕ್ಕವರಿಂದ ಹಿಡಿದು ಎಲ್ಲರು ತಿನ್ನುವ ಅಹಾರ ಇದಾಗಿದೆ. ಸಾಮಾನ್ಯವಾಗಿ ಹೂಕೋಸು ಹಾಕಿ ಡೀಪ್ ಫ್ರೈ ಮಾಡಿ ಕೆಂಪು ಸಾಸ್ ಹಾಕಿ ತಯಾರಿಸಲಾಗುತ್ತದೆ. ಸಂಶ್ಲೇಷಿತ ಬಣ್ಣ ಹಾಗೂ ನೈರ್ಮಲ್ಯದ ಕಾಳಜಿಯಿಂದಾಗಿ ಈ ಆಹಾವರನ್ನು ನಿಷೇಧಿಸಲಾಗಿದೆ.
ಗೋಬಿ ಮಂಚೂರಿಯನ್ ಅನ್ನು ಬ್ಯಾನ್ ಮಾಡುವ ನಿರ್ಣಯ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ನದ್ದಲ್ಲ. 2022 ರಲ್ಲಿ ಶ್ರೀದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ ಮೊದಲು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆಹಾರ ಮತ್ತು ಔಷಧಗಳ ಆಡಳಿತವು (FDA), ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್ಗೆ ಗೋಬಿ ಮಂಚೂರಿಯನ್ ಅನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳನ್ನು ನಿಷೇಧಿಸಲು ಸೂಚಿಸಿತ್ತು. ಸಂಶ್ಲೇಷಿತ ಬಣ್ಣದಿಂದ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋವಾದ ಮಾಪುಸಾ ಪಟ್ಟಣದಲ್ಲಿ ನಿಷೇಧಿಸಲಾಗಿದೆ.