ಅಕ್ಕಿಕಾಳಿಗಿಂತ ಚಿಕ್ಕದಾದ ಗೋಲ್ಡ್ ಮೋದಿ ಕಲಾಕೃತಿ

ಶಿವಮೊಗ್ಗ : ಇಂದು ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬ. ಈ ಹಿನ್ನೆಲೆ ಶಿವಮೊಗ್ಗದ ಭದ್ರಾವತಿ ನಗರದಲ್ಲಿರುವ ಅಕ್ಕಸಾಲಿಗರೊಬ್ಬರು ಅಕ್ಕಿಕಾಳಿಗಿಂತ ಚಿಕ್ಕದಾದ ಚಿನ್ನದ ಮೋದಿ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ರವಿಚಂದ್ರ ಎಂಬ ಕಲಾವಿದ ಬಂಗಾರದಲ್ಲಿ ಮೋದಿ ಅರಳಿಸಿ, ಮನೆಮಾತಾಗಿದ್ದಾರೆ.

ಈ ಕಲಾಕೃತಿಗೆ 20 ಮಿ.ಗ್ರಾಂ ಬಂಗಾರ ಬಳಸಲಾಗಿದೆ. ಕಲಾಕೃತಿ 3.75 ಮಿ.ಮೀ. ಎತ್ತರ, 3 ಮಿ.ಮೀ. ಅಗಲ ಇದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಿದ್ದು, ಇದನ್ನು ಅವರಿಗೆ ಸಮರ್ಪಿಸಿದ್ದಾರೆ.

ರವಿಚಂದ್ರ ಅವರು ಈ ಕಲಾಕೃತಿಯನ್ನು ರಚಿಸಲು 2 ತಿಂಗಳಿನಿಂದ ಪ್ರತಿದಿನ ಒಂದೆರಡು ಗಂಟೆಗಳ ಸಮಯ ವ್ಯಯಿಸಿದ್ದಾರೆ.

ಮೋದಿಯವರು ಸಮ್ಮತಿಸಿದರೇ ದೆಹಲಿಗೆ ಹೋಗಿ ಇದನ್ನು ಕೊಟ್ಟು ಬರುತ್ತೇನೆ ಎಂಬ ಆಶಯ ಹೊಂದಿದ್ದಾರೆ ರವಿಚಂದ್ರ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This