ನವದೆಹಲಿ : ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲಿದ್ದು, ಪಂಜಾಬ್ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ವೊಂದನ್ನು ನೀಡಿದೆ. ರಾಜ್ಯದಲ್ಲಿ ಗುರುವಾರದಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದು, ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಪಂಜಾಬ್ ಸರ್ಕಾರ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ತನಕ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದೆ. ಏತನ್ಮಧ್ಯೆ ಸರ್ಕಾರ ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಿದೆ. ಒಬ್ಬ ವ್ಯಕ್ತಿ 2 ಲೀಟರ್ ಮದ್ಯವನ್ನು ಮಾತ್ರ ಖರೀದಿ ಮಾಡಬಹುದು. ಮದ್ಯವನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ ಕರ್ಪ್ಯೂ ಅವಧಿಯಲ್ಲಿ ಸಂಚಾರ ನಡೆಸಲು ಪಾಸ್ ಹೊಂದಿರಬೇಕು.
ಪಂಜಾಬ್ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪಂಜಾಬ್ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.








