ಮ್ಯೂಚುಯಲ್ ಫಂಡ್ ಹೂಡಿಕೆದಾರರಿಗೆ ಒಂದು ಗುಡ್ ನ್ಯೂಸ್ ಇದೆ. ಇನ್ಮುಂದೆ ಹೂಡಿಕೆದಾರರು ತಮ್ಮ KYC (Know Your Customer) ಪ್ರಕ್ರಿಯೆಯನ್ನು ಹತ್ತಿರದ ಅಂಚೆ ಕಚೇರಿಗಳಲ್ಲೇ ಪೂರ್ಣಗೊಳಿಸಬಹುದಾಗಿದೆ.
ಭಾರತದ ಅಂಚೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಮ್ಯೂಚುಯಲ್ ಫಂಡ್ ಹೂಡಿಕೆದಾರರಿಗೆ ಇದೀಗ ಕೆವೈಸಿ ಪರಿಶೀಲನೆ, ದಾಖಲೆಗಳ ಸಂಗ್ರಹಣೆ ಮತ್ತು ಅವುಗಳನ್ನು ಸಂಬಂಧಪಟ್ಟ ಆಸ್ತಿ ನಿರ್ವಹಣಾ ಕಂಪನಿಗಳಿಗೆ (AMC) ಕಳುಹಿಸುವ ಸೇವೆಗಳನ್ನು ಅಂಚೆ ಕಚೇರಿಗಳಲ್ಲಿಯೇ ನೀಡಲಾಗುತ್ತಿದೆ.
ಅಂಚೆ ಕಚೇರಿಗಳಲ್ಲಿ ದೊರೆಯುವ ಹೊಸ ಸೌಲಭ್ಯಗಳು:
KYC ಫಾರ್ಮ್ ಭರ್ತಿ ಮಾಡುವುದು
KYC ದಾಖಲೆಗಳ ಪರಿಶೀಲನೆ
ಸ್ವಯಂ ದೃಢೀಕೃತ ದಾಖಲೆಗಳ ಸಂಗ್ರಹಣೆ
ದಾಖಲೆಗಳನ್ನು AMCsಗೆ ಕಳುಹಿಸುವ ವ್ಯವಸ್ಥೆ
ಇವುಗಳ ಮೂಲಕ ಹೂಡಿಕೆದಾರರಿಗೆ ಬ್ಯಾಂಕ್ ಅಥವಾ ಹೂಡಿಕೆ ಸಂಸ್ಥೆಗಳ ಕಚೇರಿಗೆ ಹೋಗುವ ಅಗತ್ಯವಿಲ್ಲದೇ, ಹತ್ತಿರದ ಅಂಚೆ ಕಚೇರಿಯಲ್ಲೇ ಈ ಎಲ್ಲ ಕಾರ್ಯಗಳನ್ನು ನೆರವೇರಿಸಬಹುದು.
ಇತ್ತೀಚೆಗೆ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಹೂಡಿಕೆದಾರರಿಗೆ ಸುಲಭ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೆತ್ತಿಕೊಳ್ಳಲಾಗಿದೆ.
ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೂಡಿಕೆದಾರರಿಗೆ ಉಪಯೋಗವಾಗಲಿದೆ. ಏಕೆಂದರೆ ಅಲ್ಲಿ ಹೆಚ್ಚಿನ ಜನರಿಗೆ ಬ್ಯಾಂಕುಗಳಿಗೆ ಹೋಗುವುದು ಅಥವಾ ಆನ್‌ಲೈನ್‌ನಲ್ಲಿ KYC ಮಾಡುವುದು ಸವಾಲಾಗಿರುತ್ತದೆ.
ಹೂಡಿಕೆದಾರರಿಗೆ ಲಾಭ:
ಸಮಯ ಉಳಿತಾಯ
ಹತ್ತಿರದ ಅಂಚೆ ಕಚೇರಿಯಲ್ಲಿಯೇ ಕಾರ್ಯವನ್ನು ಪೂರ್ತಿಗೊಳಿಸುವ ಅವಕಾಶ
ಗ್ರಾಮೀಣ ಹಾಗೂ ನಗರ ಪ್ರದೇಶದ ಹೂಡಿಕೆದಾರರಿಗೆ ಹೆಚ್ಚು ಅನುಕೂಲ








