SSLC ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ಸಿಹಿ ಸುದ್ದಿ – ಸಂಭಾವನೆ ಪರಿಷ್ಕರಣೆ
Sslc ಪರೀಕ್ಷೆಯ ಉತ್ತರ ಪತ್ರಿಕೆಗಳನ್ನ ಮೌಲ್ಯಮಾಪನ ನಡೆಸುವ ಮೌಲ್ಯಮಾಪಕರ ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎಸ್ಎಸ್ಎಲ್ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ದರಗಳನ್ನ ಪರಿಷ್ಕರಣೆ ಮಾಡಲಾಗಿದೆ ರಾಜ್ಯಾದ್ಯಂತ SSlc ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಿಂದ ಆರಂಭವಾಗಲಿದೆ.
34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. ಈ ಕಾರ್ಯಕ್ಕಾಗಿ 60,000 ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಇತ್ತ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಸುಸೂತ್ರವಾಗಿ ನಡೆದಿತ್ತು.
ಮೌಲ್ಯ ಮಾಪನದ ಪರಿಷ್ಕತ ದರ ಹೀಗಿದೆ :
ಜಂಟಿ ಮುಖ್ಯ ಪರೀಕ್ಷಕರು – 7270 ರೂ.
ಉಪ ಮುಖ್ಯ ಪರೀಕ್ಷಕರು – 5464 ರೂ.
ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳು (ಪ್ರತಿ ಪತ್ರಿಕೆಗೆ)
ಪ್ರಥಮ ಭಾಷೆ- 23 ರೂ.
ದ್ವಿತೀಯ/ತೃತೀಯ ಭಾಷೆ- 21 ರೂ.
ಐಚ್ಛಿಕ ವಿಷಯಗಳು- 21 ರೂ.
ಭತ್ಯೆ..
ದಿನಭತ್ಯೆ (ಬೆಂಗಳೂರು) – 596 ರೂ.
ದಿನ ಭತ್ಯೆ (ಇತರೆ ಸ್ಥಳ) – 469 ರೂ.
ಸ್ಥಳೀಯ ಭತ್ಯೆ (ಬೆಂಗಳೂರು) – 234 ರೂ.
ಸ್ಥಳೀಯ ಭತ್ಯೆ (ಇತರೆ ಸ್ಥಳಗಳು) -189 ರೂ.
ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ – 4515 ರೂ.
ಕ್ಯಾಂಪ್ ಸಹಾಯಕರು – 1260 ರೂ.
ಡಿ ದರ್ಜೆ ಸಿಬ್ಬಂದಿ -630 ರೂ ಭತ್ಯೆಯನ್ನ ಸರ್ಕಾರ ನೀಡುತ್ತಿದೆ.