banking virus: ನಿಮ್ಮ ಹಣ ಕದಿಯಲಿವೆ ಫೇಕ್ ಆಪ್, ಸರ್ಕಾರದಿಂದ ಎಚ್ಚರಿಕೆ…
ಭಾರತ ಸರ್ಕಾರದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ Cert-In , ಇತ್ತೀಚೆಗೆ ಭಾರತದಲ್ಲಿ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡಸುತ್ತಿರುವ SOVA ಆಂಡ್ರಾಯ್ಡ್ ಟ್ರೋಜನ್ ವಿರುದ್ಧ ಎಚ್ಚರಿಕೆ ನೀಡಿದೆ.
ಬ್ಯಾಂಕಿಂಗ್ ಟ್ರೋಜನ್ ಬಳಕೆದಾರರ ಹೆಸರುಗಳು ಮತ್ತು ಪಾಸ್‌ವರ್ಡ್‌ಗಳನ್ನು ಕೀಲಾಗಿಂಗ್ ಮೂಲಕ ಕದಿಯುತ್ತದೆ, ಕುಕೀಗಳನ್ನು ಕದಿಯುತ್ತದೆ ಮತ್ತು ಬಳಕೆದಾರರನ್ನು ಮೋಸಗೊಳಿಸಲು ಹಲವಾರು ಜನಪ್ರಿಯ ಅಪ್ಲಿಕೇಶನ್‌ಗಳ ಹೆಸರಿನಲ್ಲಿ ಫೇಕ್ ಆಪ್ ಆಪ್ ಗಳನ್ನ ಬಿಡುಗಡೆ ಮಾಡುತ್ತಿದೆ.
SOVA ಈ ಹಿಂದೆ US, ರಷ್ಯಾ ಮತ್ತು ಸ್ಪೇನ್‌ನಂತಹ ದೇಶಗಳ ಮೇಲೆ ಕೇಂದ್ರೀಕರಿಸಿತ್ತು, ಆದರೆ ಜುಲೈ 2022 ರಲ್ಲಿ ಅದು ಭಾರತ ಸೇರಿದಂತೆ ಹಲವಾರು ಇತರ ದೇಶಗಳನ್ನು ತನ್ನ ಗುರಿಯಾಗಿಸಿಕೊಂಡಿದೆ.
ಈ ಮಾಲ್‌ವೇರ್‌ನ ಇತ್ತೀಚಿನ ಆವೃತ್ತಿಯು ನಕಲಿ Android ಅಪ್ಲಿಕೇಶನ್‌ಗಳಲ್ಲಿ ಅಡಗಿಕೊಳ್ಳುತ್ತದೆ, ಅದು Chrome, Amazon ಮತ್ತು ಇತರ ಜನಪ್ರಿಯ ಅಪ್ಲಿಕೇಶನ್‌ಗಳ ಲೋಗೋದೊಂದಿಗೆ ಬಳಕೆದಾರರನ್ನ ಮೋಸ ಮಾಡುತ್ತಿದೆ.
ಬಳಕೆದಾರರು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಿದಾಗ ಅವರ ಖಾತೆಗಳನ್ನು ಹ್ಯಾಕ್ ಮಾಡಿ ಬಳಕೆದಾರರ ಹೆಸರುಗಳು ಮತ್ತು ಪಾಸ್‌ವರ್ಡ್‌ಗಳು ಸೇರಿದಂತೆ ಬ್ಯಾಂಕಿಂಗ್ ಮಾಹಿತಿಯನ್ನ ಈ ಮಾಲ್‌ವೇರ್ ಸೆರೆಹಿಡಿಯುತ್ತದೆ. ಈ ಅಪಾಯಕಾರಿ ಬ್ಯಾಂಕಿಂಗ್ ಮಾಲ್‌ವೇರ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ನಿಯಮಗಳನ್ನ ಅನುಸರಿಸಿ
Google Play Store ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ
ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ/ಇನ್‌ಸ್ಟಾಲ್ ಮಾಡುವ ಮೊದಲು ಹೆಚ್ಚುವರಿ ಮಾಹಿತಿ ಚೆಕ್ ಮಾಡಿ
Android ಭದ್ರತಾ ಪ್ಯಾಚ್‌ಅಪ್‌ಡೇಟ್‌ಗಳನ್ನು ಎಂದಿಗೂ ಮಿಸ್ ಮಾಡಬೇಡಿ
ಬ್ಯಾಂಕ್‌ನಿಂದ ಬಂದಿರುವ ಎಸ್‌ಎಂಎಸ್ ಅಸಲಿಯೇ ಎಂದು ತಿಳಿದುಕೊಳ್ಳಿ
ಇಮೇಲ್ SMS ಅಥವಾ Google ನಲ್ಲಿ ಮಾಡುವ ಕ್ಲಿಕ್ ಮೇಲೆ ಗಮನವಿಡಿ