ಗೋಹತ್ಯೆ ನಿಷೇಧಿಸಿದ ಶ್ರೀಲಂಕಾ ಸರ್ಕಾರ
ಕೊಲಂಬೊ ,ಅಕ್ಟೋಬರ್01: ಶ್ರೀಲಂಕಾದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ಮಂಗಳವಾರ ಪ್ರಕಟಿಸಿದೆ. ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಆದರೆ ಗೋಮಾಂಸ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.
ಗೋರಿಕಾಯಿ(ಕ್ಲಸ್ಟರ್ ಬೀನ್ಸ್)ನ 7 ಅದ್ಭುತ ಪ್ರಯೋಜನಗಳು
ಈ ತಿಂಗಳ ಆರಂಭದಲ್ಲಿ, ಪ್ರಧಾನಿ ರಾಜಪಕ್ಸೆ ಜಾನುವಾರು ಹತ್ಯೆಯನ್ನು ನಿಷೇಧಿಸುವ ಕುರಿತಾದ ಪ್ರಸ್ತಾವನೆಯನ್ನು ಆಡಳಿತಾರೂಢ ಲಂಕಾದ ಪೊದುಜಾನ ಪೆರಮುನಾ ಪಕ್ಷದ ಸಂಸದೀಯ ಗುಂಪಿಗೆ ಸಲ್ಲಿಸಿದ್ದರು. ಪಕ್ಷದ ಶಾಸಕರು ಈ ಪ್ರಸ್ತಾಪವನ್ನು ಶ್ಲಾಘಿಸಿದ್ದು, ಕ್ಯಾಬಿನೆಟ್ ಅನುಮೋದನೆಯ ನಂತರ ಅದು ಅಧಿಕೃತ ಅನುಮತಿಯನ್ನು ಪಡೆಯಿತು.
ಕೆಲವು ವರ್ಷಗಳಿಂದ, ಪ್ರತಿಗಾಮಿ ಸಿಂಹಳ-ಬೌದ್ಧ ಗುಂಪುಗಳು ಜಾನುವಾರು ಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಶ್ರೀಲಂಕಾ ಬೌದ್ಧ ಬಹುಸಂಖ್ಯಾತ ದೇಶವಾಗಿದ್ದು, ಧರ್ಮವನ್ನು ಅನುಸರಿಸುವವರು ದೇಶದ ಜನಸಂಖ್ಯೆಯ 70% ರಷ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಗೋಮಾಂಸವನ್ನು ತಿನ್ನುವುದಿಲ್ಲ. ಏಕೆಂದರೆ ಅವರು ಹಸುಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಆದರೆ ಸುಮಾರು 10% ರಷ್ಟಿರುವ ಅಲ್ಪಸಂಖ್ಯಾತ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಹಿಂದೂಗಳ ಒಂದು ಭಾಗವು ಗೋಮಾಂಸವನ್ನು ಸೇವಿಸುತ್ತಾರೆ.
ಇಂದಿನಿಂದ ಡೆಬಿಟ್/ಕ್ರೆಡಿಟ್ ಕಾರ್ಡ್ ಪಾವತಿಗೆ ಹೊಸ ರೂಲ್ಸ್ – ಇಲ್ಲಿದೆ ನೀವು ತಿಳಿದಿರಬೇಕಾದ 10 ಮಾಹಿತಿಗಳು
ತನ್ನ ಕ್ರಮವನ್ನು ಸಮರ್ಥಿಸಿರುವ ಸರ್ಕಾರ, ಸಾಂಪ್ರದಾಯಿಕ ಕೃಷಿ ಉದ್ದೇಶಗಳಿಗೆ ಬೇಕಾದ ಜಾನುವಾರು ಸಂಪನ್ಮೂಲವು ಗೋ ಹತ್ಯೆಯ ಕಾರಣದಿಂದಾಗಿ ಕೊರತೆಯನ್ನು ಕಾಣುತ್ತಿದೆ. ಗೋ ಹತ್ಯೆಯಿಂದ ಸ್ಥಳೀಯ ಡೈರಿ ಉದ್ಯಮಕ್ಕೆ ಅಡ್ಡಿಯಾಗಿದೆ ಎಂದು ವಿವಿಧ ಪಕ್ಷಗಳು ಸೂಚಿಸಿವೆ ಎಂದು ಸರ್ಕಾರ ಹೇಳಿದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Tweets by SaakshaTv