Govinda Karajola | ಕಾಂಗ್ರೆಸ್ ಗೆ ಪಾಪ ಪ್ರಜ್ಞೆ ಕಾಡುತ್ತಿದೆ
ಬೆಳಗಾವಿ : ಕಾಂಗ್ರೆಸ್ ನವರು ಭಾರತವನ್ನು ಇಬ್ಭಾಗ ಮಾಡಿದ ಕಳಂಕವನ್ನ ಹೊತ್ತಿದ್ದಾರೆ ಎಂದು ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವ ಗೋವಿಂದ ಕಾರಜೋಳ ಟೀಕೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ ನವರು ಭಾರತವನ್ನು ಇಬ್ಭಾಗ ಮಾಡಿದ ಕಳಂಕವನ್ನ ಹೊತ್ತಿದ್ದಾರೆ.
ಸ್ವಾತಂತ್ರ್ಯ ಬಂದನಂತರ ಕಾಂಗ್ರೆಸ್ ನವರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನ ಇಬ್ಭಾಗ ಮಾಡಿದ್ರು.
ಆ ಪಾಪದ ಪ್ರಜ್ಞೆ ಕಾಂಗ್ರೆಸ್ ನವರಿಗೆ ಕಾಡುತ್ತಿದೆ. ಅದಕ್ಕಾಗಿ ಭಾರತ ಜೋಡೋ ಯಾತ್ರೆ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನವರಿಂದ ಭಾರತವನ್ನ ಜೋಡಿಸಲು ಆಗಲ್ಲ. ಕಾಂಗ್ರೆಸ್ ಪಕ್ಷವನ್ನು ಉಳಿಸಲು ಆಗುವುದಿಲ್ಲ.

ಭಾರತ ಇಭ್ಭಾಗ ಆಗಿ ಪಾಕಿಸ್ತಾನ, ಬಾಂಗ್ಲಾದೇಶ ಆಗಿದೆ. ಭಾರತ ಇಬ್ಭಾಗ ಆಗಬಾರದೆಂದು ನಮ್ಮ ಪೂರ್ವಜರ ಕನಸಿತ್ತು.
ಅಖಂಡ ಭಾರತದ ಕನಸು ಧ್ವಂಸ ಮಾಡಿದವರು ಕಾಂಗ್ರೆಸ್ ನವರು ಎಂದು ಸಚಿವರು ವಾಗ್ದಾಳಿ ನಡೆಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆಯ ಬಿಜೆಪಿಯ ನಾಯಕತ್ವದ ಬಗ್ಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಬಿಜೆಪಿಯಲ್ಲಿ ನಾಯಕತ್ವ ವಹಿಸುವ ಸಾಕಷ್ಟು ನಾಯಕರು ಇದ್ದಾರೆ.
ಇಡೀ ಜಿಲ್ಲೆಯ ಜನ ಬಿಜೆಪಿಯನ್ನ ಬೆಂಬಲಿಸುತ್ತಾರೆ. ಜಿಲ್ಲೆಯ 18 ವಿಧಾನಸಭೆ ಮತಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.