ಶ್ರೀನಗರ: ಶಂಕಿತರ ಉಗ್ರರ ಮೇಲೆ ನಿಗಾ ಇಡುವುದಕ್ಕಾಗಿ ಅವರ ಕಾಲಿಗೆ ಜಿಪಿಎಸ್ ಬಳೆ ಹಾಕಲಾಗಿದೆ.
ಜಮ್ಮು ಕಾಶ್ಮೀರ ಪೊಲೀಸರು (Jammu Kashmir) ಇದನ್ನು ಪರಿಚಯಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಬಂಧನವಾದವರಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ದೇಶದ ಮೊದಲ ಪೊಲೀಸ್ ಪಡೆ ಎಂಬುವುದಕ್ಕೆ ಪಾತ್ರರಾಗಿದ್ದಾರೆ.
ಜಿಪಿಎಸ್ ಟ್ರ್ಯಾಕರ್ ಆಂಕ್ಲೆಟ್ ವ್ಯಕ್ತಿಯ ಪಾದದ ಸುತ್ತಲೂ ಧರಿಸಬಹುದಾದ ಸಾಧನ. ಇದು ಅವರ ಚಲನೆ ಟ್ರ್ಯಾಕ್ ಮಾಡುತ್ತದೆ. ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿನ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಜೈಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಟ್ಟಣೆ ಕಡಿಮೆ ಮಾಡಲು ಈ ಸಾಧನ ಬಳಕೆ ಮಾಡಲಾಗುತ್ತದೆ. ಸದ್ಯ ಈ ಸಾಧನವನ್ನು ಹಲವಾರು ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ.