12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳು ಪ್ರಾರಂಭ Saaksha Tv
ಬೆಂಗಳೂರು: ರಾಜ್ಯದ 12 ಜಿಲ್ಲೆಗಳಲ್ಲಿ ಪ್ರಾರಂಭವಾಗುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದರು.
ಜನವರಿ 26 ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯದ 12 ಜಿಲ್ಲೆಗಳ ಗ್ರಾಮಪಂಚಾಯಿತಿಯಲ್ಲಿ ಪ್ರಾರಂಭವಾಗುತ್ತಿರುವ 3000 ಗ್ರಾಮ ಒನ್ ಸೇವಾ ಉದ್ಘಾಟಿಸಲಾಗಿದೆ.
ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ತಲುಪಿಸುವ ಗುರಿ ಈ ಯೋಜನೆ ಹೊಂದಿದೆ. ಈ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಲ್ಲಿ ಕನಿಷ್ಠ ಒಂದು “ಗ್ರಾಮ ಒನ್ ಸೇವಾ ಕೇಂದ್ರ”ವನ್ನು ಹೊಂದಿರಬೇಕು. ಈ ಯೋಜನೆಯ ಮುಖಾಂತರ ನಾಗರಿಕ ಸೇವಾ ಸಿಂಧು ವೇದಿಕೆಯ ಮೂಲಕ 100ಕ್ಕೂ ಅಧಿಕ ಸೇವೆಗಳನ್ನು ನಾಗರಿಕರಿಗೆ ತಲುಪುತ್ತದೆ.
ಇದರಿಂದ ಗ್ರಾಮಗಳಲ್ಲಿ ನಾಗರಿಕರು ಪ್ರಯಾಣದ ವೆಚ್ಚ, ಮಧ್ಯವರ್ತಿಗಳ ಹಾವಳಿ ಮತ್ತು ಇತರೆ ವೆಚ್ಚದಿಂದ ಮುಕ್ತರಾಗಬಹುದು. ಸಕಾಲದಲ್ಲಿ ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಒನ್ ಯೋಜನೆಯನ್ನು ‘ಸಕಾಲ’ ತಂತ್ರಾಂಶದೊಂದಿಗೆ ಏಕಿಕರಣ ಮಾಡಿರುವುದು ಈ ಯೋಜನೆಯ ಹಲವು ವೈಶಿಷ್ಟ್ಯಗಳಲ್ಲಿ ಒಂದು.