ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸದೆ ಅಪಮಾನ ಮಾಡಿದೆ ಈ ಸ್ಥಳಿಯ ಆಡಳಿತ ಮಂಡಳಿ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯತಿಯ ಕಛೇರಿಯಲ್ಲಿ ಭಾರತ ರತ್ನ ಡಾ!! ಬಾಬಾ ಸಾಹೇಬ್ ಅಂಬೇಡ್ಕರವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ.
ದೇಶವನ್ನು ಕಟ್ಟಲು ಶ್ರಮಿಸಿದ ಮತ್ತು ತ್ಯಾಗ ಮಾಡಿದ ಎ.ಜೆ.ಪಿ. ಅಬ್ದುಲ್ ಕಲಾಂ, ಜವಹಾರಲಾಲ್ ನೆಹರು, ಕನಕದಾಸರು, ರಾಜೀವ್ ಗಾಂಧಿ ಸೇರಿದಂತೆ ಇನ್ನೂ ಕೆಲ ಮಹನೀಯರಿಗೆ ಹೂ ಮಾಲೆ ಹಾಕಿ ಗೌರವಿಸಲಾಗಿದೆ. ಆದರೆ ದೇಶಕ್ಕೆ ಅಧಿಕೃತ ಕಾನೂನಿನ ಚೌಕಟ್ಟು ನೀಡಿದ, ಸಮಾನತೆ, ಮಾನವ ಹಕ್ಕಗಳನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಯಾವುದೇ ರೀತಿಯ ಹೂ ಮಾಲೆ ಹಾಕದೆ ಅಪಮಾನ ಮಾಡಲಾಗಿದೆ. ಜೊತೆಗೆ ಈ ಸಾಲಿನಲ್ಲಿ ಕಾಣುವ ಬೇರೆ ಮಹನೀಯರ ಭಾವಚಿತ್ರಗಳ ಪೋಟೋಗಳಿಗೆ ಹೊಸ ಫ್ರೇಮ್ಗಳನ್ನು ಹಾಕಲಾಗಿದೆ. ಅಂಬೇಡ್ಕರ್ ಅವರ ಭಾವಚಿತ್ರ ಇರುವ ಪೋಟೋ ಫ್ರೇಮ್ ಮಾತ್ರ ಹಳೆಯದ್ದೇ ಇದೆ.
ಈ ಬಗ್ಗೆ ಗುರುವಿನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಗಿರೀಶ್ ಅವರನ್ನು ವಿಚಾರಿಸಿದಾಗ ಪಂಚಾಯಿತಿಯಲ್ಲಿ ಆ ರೀತಿ ಅಪಮಾನ ನಡೆದಿಲ್ಲ. ನಿಮಗೆ ಯಾರು ಹೇಳಿದ್ದು, ನಾವು ಅಂಬೆಡ್ಕರ್ ವಿಚಾರಗಳನ್ನು ಪಾಲಿಸುವವರು ಅವರಿಗೆ ಅಪಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸಾಕ್ಷಾ ಟಿವಿ ಪ್ರತಿನಿಧಿ ಮರು ಪ್ರಶ್ನೆ ಹಾಕಿದಾಗ ಏಕಾಏಕಿಯಾಗಿ ದೂರವಾಣಿ ಕರೆಯನ್ನು ಕಟ್ ಮಾಡಿದ್ದಾರೆ. ಇನ್ನೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜುಲೇನಾಬಿ ಹುಬ್ಬಳಿ ನೆಪ ಮಾತ್ರಕ್ಕೆ ಅಧ್ಯಕ್ಷರಾಗಿದ್ದಾರೆ. ಆಡಳಿತವನ್ನು ಅವರ ಪುತ್ರನಾದ ಹುಸೇನ್ ಹುಬ್ಬಳಿ ನೋಡಿಕೊಳ್ಳುತ್ತಾರೆ ಎಂಬ ಆರೋಪವನ್ನು ಸ್ಥಳಿಯರು ಮಾಡುತ್ತಿದ್ದಾರೆ. ಈ ಗ್ರಾಮ ಪಂಚಾಯಿತಿಯಲ್ಲಿ ಕೆಲ ವರ್ಷಗಳಿಂದ ಅಂಬೆಡ್ಕರ್ ಗೆ ಅಪಮಾನ ಮಾಡಲಾಗುತ್ತಿದೆ ಎಂದು ಸ್ಥಳಿಯರಾದ ಪಕ್ಕೀರೇಶ್ ಹರಿಜನ್ ಆರೋಪಿಸಿದ್ದಾರೆ.








