Shri Lanka: ಭಾರತ ಶ್ರೀಲಂಕಾಕ್ಕೆ ದೊಡ್ಡ ಅಣ್ಣ : ಮಾಜಿ ಕ್ರಿಕೇಟಿಗ ಜಯಸೂರ್ಯ

1 min read
Jaysurya Saaksha Tv

ಭಾರತ ಶ್ರೀಲಂಕಾಕ್ಕೆ ದೊಡ್ಡ ಅಣ್ಣ : ಮಾಜಿ ಕ್ರಿಕೇಟಿಗ ಜಯಸೂರ್ಯ

ಕೊಲಂಬೋ: ಶ್ರೀಲಂಕಾ ಆರ್ಥಿಕ ಸಂಕಷ್ಟು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡಿದ ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಕ್ರಿಕೇಟಿಗ್ ಜಯಸೂರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸಲು ಭಾರತ ಇದುವರೆಗೆ ಶ್ರೀಲಂಕಾಗೆ 2,70,000 ಮೆಟ್ರಿಕ್ ಟನ್(ಎಂಟಿ) ಇಂಧನವನ್ನು ಪೂರೈಸಿದೆ. ಕಳೆದ 24 ಗಂಟೆಗಳಲ್ಲಿ ಭಾರತ 36,000 ಎಂಟಿ ಪೆಟ್ರೋಲ್ ಹಾಗೂ 40,000 ಎಂಟಿ ಡೀಸೆಲ್ ರವಾನಿಸಿದೆ. ಇದರೊಂದಿಗೆ ಔಷಧ, ಧಾನ್ಯ, ಅಕ್ಕಿಯನ್ನೂ ಕಳುಹಿಸಿದೆ.

India-Shri Lanka Saaksha Tv

ಈ ಸಹಾಯಕ್ಕಾಗಿ ಜಯಸೂರ್ಯ ಭಾರತ  ಶ್ರೀಲಂಕಾದ ಬಿಗ್ ಬ್ರದರ್'(ದೊಡ್ಡ ಅಣ್ಣ) ಎಂದರು. ನೆರೆಯ ದೇಶವಾಗಿ ಹಾಗೂ ನಮ್ಮ ದೇಶದ ಹಿರಿಯ ಸಹೋದರನಾಗಿ, ಭಾರತ ಯಾವಾಗಲೂ ನಮಗೆ ಸಹಾಯ ಮಾಡಿದೆ. ನಾವು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಬದುಕು ಕಷ್ಟಕರವಾಗಿದೆ. ಭಾರತ ಹಾಗೂ ಇತರ ದೇಶಗಳ ಸಹಾಯದಿಂದ ನಾವು ಈ ಆರ್ಥಿಕ ಭಿಕ್ಕಟ್ಟಿನಿಂದ ಹೊರಬರಲು ಆಶಿಸುತ್ತೇವೆ ಎಂದರು.

ಪ್ರಸ್ತುತ ಶ್ರೀಲಂಕಾ ತೀವ್ರ ಗತಿಯಲ್ಲಿ ಆಹಾರ ಹಾಗೂ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಈ ಕೋವಿಡ್-19 ಹಾವಳಿ ಪ್ರಾರಂಭವಾದಾಗಿನಿಂದ ಶ್ರೀಲಂಕಾದಲ್ಲಿ ಆರ್ಥಿಕ ಭಿಕ್ಕಟ್ಟು ನಿಧಾನವಾಗಿ ಪ್ರಾರಂಭವಾಯಿತು. ಪ್ರವಾಸೋದ್ಯಮವೇ ಉಸಿರಾಗಿರುವ ದ್ವೀಪ ದೇಶದಲ್ಲಿ ಕೋವಿಡ್ ಪ್ರಾರಂಭವಾದಂತೆ ಪ್ರವಾಸೋದ್ಯಮಕ್ಕೆ ಬೇಡಿಕೆ ಕಡಿಮೆಯಾದ್ದರಿಂದ ಇದೀಗ ಶ್ರೀಲಂಕಾ ಕಷ್ಟದ ದಿನಗಳನ್ನು ಎದುರಿಸುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd