ಭಾರತದ ಹಾಡುಗಳಿಗೆ ರೀಲ್ಸ್ ಮಾಡುವ ಕಿಲಿಪೌಲ್, ನೀಮಾ ಪೈಲ್ ಗೆ ಕೃತಜ್ಞತೆ ತಿಳಿಸಿದ – ಪ್ರಧಾನಿ
ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮತ್ತು ಡ್ಯಾನ್ಸ್ ರೀಲ್ಸ್ ಮಾಡುವ ಮೂಲಕ ಜನಪ್ರಿಯವಾಗಿರುವ ತಾಂಜೇನಿಯಾದ ಸಹೋದರ ಸಹೋದರಿ ಕಿಲಿಪೌಲ್ ಮತ್ತು ನೀಮಾ ಅವರನ್ನ ಪ್ರಧಾನಿ ನರೇಂದ್ರ ಮೋದಿ 86 ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ತಾಂಜಾನಿಯಾದ ಕಿಲಿ ಮತ್ತು ನೀಮಾ ಅವರು ಭಾರತೀಯ ಸಂಗೀತದ ಕುರಿತು ಒಲವು ತೋರುತ್ತಿದ್ದಾರೆ. ಲತಾ ದೀದಿ ಅವರಿಗೆ ಗೌರವ ಸಲ್ಲಿಸಲು ನಮ್ಮ ರಾಷ್ಟ್ರಗೀತೆ ಹಾಡಿದರು. ಅದರಂತೆಯೇ ನಮ್ಮ ಭಾಷೆಯ ಮಕ್ಕಳು ಬೇರೆ ಭಾರತದ ಬೇರೆ ಭಾಷೆಯಲ್ಲಿ ಲಿಪ್ ಸಿಂಕ್ ಮಾಡಿದರೆ ಹೇಗೆ ? ಕನ್ನಡ ಮಕ್ಕಳು ಜಮ್ಮು ಕಾಶ್ಮೀರ ಭಾಷೆಯಲ್ಲಿ ಲಿಪ್ ಸಿಂಕ್ ಮಾಡಿದರೆ ಹೇಗೆ ಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಮೋದಿ ಹೇಳಿದರು.
ಕೆಲವು ದಿನಗಳ ಹಿಂದೆ ಮಾತೃಭಾಷಾ ದಿನ ಆಚರಿಸಿದ್ದನ್ನ ಗಮನಿಸಿದ ಪ್ರಧಾನಿ ಮೋದಿ, ಭಾರತೀಯ ಭಾಷೆಗಳನ್ನು ಕಲಿಯುವ ಮತ್ತು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದರು. “ಮಾತೃಭಾಷೆ ಎಂಬ ಪದವು ಹೇಗೆ ಹುಟ್ಟಿಕೊಂಡಿತು ಎಂಬುದರ ಕುರಿತು ಗೊತ್ತಿರುವವರು ಸಾಕಷ್ಟು ಶೈಕ್ಷಣಿಕ ಇನ್ಪುಟ್ ನೀಡಬಹುದು” “ನಮ್ಮ ತಾಯಿ ನಮ್ಮ ಜೀವನವನ್ನು ರೂಪಿಸುವಂತೆ, ನಮ್ಮ ಮಾತೃಭಾಷೆಯು ನಮ್ಮ ಜೀವನವನ್ನು ರೂಪಿಸುತ್ತದೆ” ಎಂದು ಮೋದಿ ಹೇಳಿದರು.