GST: ಕೇಂದ್ರದಿಂದ ಕರ್ನಾಟಕಕ್ಕೆ ಜಿಎಸ್ಟಿ ಬಾಕಿ ಹಣ ಬಿಡುಗಡೆ
ಕೇಂದ್ರ ಸರ್ಕಾರವು 2022 ಎಪ್ರಿಲ್ ನಿಂದ ಜೂನ್ ಅವಧಿಯ 17,000 ಕೋಟಿ ರೂಪಾಯಿ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣವನ್ನು ಬಿಡುಗಡೆಯಾಗಿದೆ.
ಇದರಲ್ಲಿ ಕರ್ನಾಟಕಕ್ಕೆ 1,915 ಕೋಟಿ ಜಿಎಸ್ಟಿ ಹಣ ಬಿಡುಗಡೆಯಾಗಿದೆ. ಜಿಎಸ್ಟಿ ಬಾಕಿ ಹಣದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಅತಿ ಹೆಚ್ಚು ಮೊತ್ತ ಪಡೆದ ರಾಜ್ಯಗಳಾಗಿದೆ.
ಜಿಎಸ್ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರ 2081 ಕೋಟಿ ರೂ ಪಡೆದು ಮೊದಲ ಸ್ಥಾನದಲ್ಲಿ ಇದ್ದರೆ, ಕರ್ನಾಟಕವು 1,915 ಕೋಟಿ ರೂ ಪಡೆದು ನಂತರದ ಸ್ಥಾನದಲ್ಲಿದೆ.
gst-release-of-gst-arrears-from-center-to-karnataka