GT vs PBKS Match | ಪಂಜಾಬ್ ಕಿಂಗ್ಸ್ ತಂಡದ ಪ್ಲೇಯಿಂಗ್ 11
ಪ್ಲೇ ಆಫ್ಸ್ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಇಂದಿನ ಪಂದ್ಯ ಸೇಡಿನ ಸಮರ. ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾದಾಗ ರೋಚಕ ಫಲಿತಾಂಶ ಹೊರಬಂದಿತ್ತು. ಕೊನೆಯ ಎರಡು ಎಸೆತಗಳಲ್ಲಿ 12 ರನ್ ಗುಜರಾತ್ ಗೆಲುವಿಗೆ ಬೇಕಿತ್ತು. ಒಡಿನ್ ಸ್ಮಿತ್ ಎಸೆದ ಕೊನೆಯ ಓವರ್ನ ಕೊನೆಯ 2 ಎಸೆತವನ್ನು ರಾಹುಲ್ ತೇವಾಟಿಯಾ ಸಿಕ್ಸರ್ ಗೆ ಅಟ್ಟಿದರು. ಗುಜರಾತ್ ಗೆದ್ದು ಬೀಗಿತು. ಆ ಸೋಲು ಪಂಜಾಬ್ ತಂಡದ ಆತ್ಮವಿಶ್ವಾಸವನ್ನೇ ಪ್ರಶ್ನೆ ಮಾಡಿತ್ತು. ಈಗ ಈ ಎರಡೂ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮತ್ತೊಂದು ರೋಚಕ ಪಂದ್ಯ ನಡೆಯುವ ಸಾಧ್ಯತೆ ಇದೆ.
ಸದ್ಯ ಅಂಕಪಟ್ಟಿಯಲ್ಲಿ ಮಯಾಂಕ್ ಅಗರ್ ವಾಲ್ ನಾಯಕತ್ವ ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲಿದೆ. 15ನೇ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ಒಂಭತ್ತು ಪಂದ್ಯಗಳನ್ನಾಡಿದೆ. ಇದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂತಿಮ ನಾಲ್ಕರ ಘಟ್ಟಪ್ರವೇಶಿಸಲು ಸಕಲ ಪ್ರಯತ್ನ ನಡೆಸುತ್ತಿದೆ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಜಾನಿ ಬೈರ್ ಸ್ಟೋ 25 ರನ್, ಮಯಾಂಕ್ 32 ರನ್ ಗಳ ಹೊರತಾಗಿಯೂ ಪಂಜಾಬ್ ತಂಡ 20 ರನ್ ಗಳಿಂದ ಪಂದ್ಯ ಸೋಲು ಕಂಡಿದೆ.

ತಂಡಗಳ ಬಲಾಬಲದ ವಿಚಾರಕ್ಕೆ ಬಂದ್ರೆ
ಪಂಜಾಬ್ ಕಿಂಗ್ಸ್ ವಿಚಾರಕ್ಕೆ ಬಂದ್ರೆ ಪ್ಲೇ ಆಫ್ ರೇಸ್ ನಲ್ಲಿರುವ ಪಂಜಾಬ್ ತಂಡದಲ್ಲಿ ಕೊಂಚ ಮಟ್ಟಿನ ಬದಲಾವಣೆಯಾದ್ರೂ ಅಚ್ಚರಿ ಏನಿಲ್ಲ. ಮುಖ್ಯವಾಗಿ ಶಿಖರ್ ಧವನ್ ಫಾರ್ಮ್ ಕಂಡುಕೊಂಡಿರುವುದು ಸಮಧಾನದ ಸಂಗತಿಯಾದ್ರೆ, ನಾಯಕ ಮಯಾಂಕ್ ಅಗರ್ ವಾಲ್ ಇನ್ನೂ ಕೂಡ ದೊಡ್ಡ ಮೊತ್ತದ ರನ್ ದಾಖಲಿಸಿಲ್ಲ. ಆದ್ರೆ ಭಾನುಕಾ ರಾಜಪಕ್ಷೆ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ನಡುವೆ ನೀರಸ ಪ್ರದರ್ಶನ ನೀಡುತ್ತಿದ್ದ ಜಾನಿ ಬೇರ್ ಸ್ಟೋವ್ ಕಳೆದ ಪಂದ್ಯದಲ್ಲಿ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸದೆ.
ಬೌಲಿಂಗ್ ನಲ್ಲಿ ಆರ್ಶಾದೀಪ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದ್ರೆ ಕಾಗಿಸೊ ರಬಾಡ ಇನ್ನೂ ಕೂಡ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿಲ್ಲ. ರಾಹುಲ್ ಚಾಹರ್ ಮತ್ತು ಸಂದೀಪ್ ಶರ್ಮಾ ಕೂಡ ಇನ್ನಷ್ಟು ಲಯ ಮತ್ತು ನಿಖರತೆಯನ್ನು ಕಾಯ್ದುಕೊಳ್ಳಬೇಕಿದೆ.
ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ವಾಲ್ (c)
ಶಿಖರ್ ಧವನ್
ಲಿಯಾಮ್ ಲಿವಿಂಗ್ಸ್ಟೋನ್
ಜಾನಿ ಬೈರ್ಸ್ಟೋ
ಭಾನುಕಾ ರಾಜಪಕ್ಸೆ
ಜಿತೇಶ್ ಶರ್ಮಾ (WK)
ರಿಷಿ ಧವನ್
ಕಗಿಸೊ ರಬಾಡ
ರಾಹುಲ್ ಚಾಹರ್
ಅರ್ಶ್ದೀಪ್ ಸಿಂಗ್
ಸಂದೀಪ್ ಶರ್ಮಾ
GT vs PBKS Match Punjab Kings Playing 11








