`ಅಯ್ಯಪ್ಪನ ದರ್ಶನ’ಕ್ಕಾಗಿ ಪಾಲಿಸಲೇಬೇಕು `ಸಪ್ತ ಮಾರ್ಗಸೂಚಿಗಳು’
ಬೆಂಗಳೂರು : ಕೊರೊನಾ ಹಿನ್ನೆಲೆ ಕೇರಳ ಸರ್ಕಾರ ಶಬರಿ ಮಲೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇರಳ ಸರ್ಕಾರದ ಪ್ರಕಟಣೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಕನ್ನಡದಲ್ಲೇ ಬಿಡುಗಡೆ ಮಾಡಿದ್ದು, ಏಳು ಮಾರ್ಗ ಸೂಚಿಗಳನ್ನು ಒಳಗೊಂಡಿದೆ.
ಮಾರ್ಗಸೂಚಿಗಳು ಹೀಗಿವೆ :
01. ಎಲ್ಲಾ ಯಾತ್ರಾರ್ಥಿಗಳು ಶಬರಿಮಲೆ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಂಡು ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆದ ಭಕ್ತರಿಗಷ್ಟೆ ಅವಕಾಶ ಇರುತ್ತದೆ.
02. ಪ್ರತಿದಿನ 1 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆಧ್ಯತೆ ಇರುತ್ತದೆ.
03. ದೇವಸ್ಥಾನ ಭೇಟಿಯ 48 ಗಂಟೆ ಅವಧಿಗೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿದ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯ. ಪ್ರವೇಶ ಸ್ಥಳದಲ್ಲಿ ಅಂಟಿಜನ್ ಟೆಸ್ಟ್ ಅವಕಾಶ ಕಲ್ಪಿಸಲಾಗಿದ್ದು, ಅದರ ವೆಚ್ಚ ಯಾತ್ರಾರ್ಥೀಗಳೇ ಭರಿಸಬೇಕು.
ಸಿಎಂ ಬಿಎಸ್‍ವೈ ಸಭೆ: ಶಾಲೆಗಳ ಆರಂಭಕ್ಕೆ ಇಂದೇ ಗ್ರೀನ್ ಸಿಗ್ನಲ್ ಸಿಗುತ್ತಾ…!
04. 10 ವರ್ಷದ ಒಳಗಿನ ಮಕ್ಕಳು 60-65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅನಾರೋಗ್ಯದಿಂದ ನಳಲುತ್ತಿರುವವರಿಗೆ ಪ್ರವೇಶ ನಿರಾಕರಣೆ.
05. ಬಿಪಿಎಲ್ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ಅದನ್ನು ಜೊತೆಗೆ ಕೊಂಡೊಯ್ಯಬೇಕು.
06. ತುಪ್ಪದ ಅಭಿಷೇಕ, ಪಂಪಾ ನದಿಯಲ್ಲಿ ಸ್ನಾನ ಹಾಗೂ ರಾತ್ರಿ ಉಳಿದುಕೊಳ್ಳುವುದು ಯಾವುದಕ್ಕೂ ಅವಕಾಶ ಇಲ್ಲ.
07. ಯಾತ್ರಾರ್ಥಿಗಳ ಪ್ರಯಾಣಕ್ಕೆ ಎರುಮೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಅವಕಾಶ ಇರುತ್ತದೆ.
ತೋಂಟದ ಸಿದ್ದಲಿಂಗ ಮಠಕ್ಕೆ ಲಿಂಗಾಯತ ಮಠಾಧೀಶರ ದೌಡು, ವಿನಯ್ ಕುಲಕರ್ಣಿ ಪರ ಬ್ಯಾಟಿಂಗ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel