ನಾನು ಕಿರಿಯ ಶಾಸಕ, ಸಚಿವ ಸ್ಥಾನವನ್ನನ ಪಕ್ಷ ನಿರ್ಧರಿಸುತ್ತದೆ – ಹಾರ್ದಿಕ್ ಪಟೇಲ್
ಗುಜರಾತ್ ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನ ಸ್ವೀಕರಿಸಿಲು ಭೂಪೇಂದ್ರ ಪಟೇಲ್ ಅವರು ಸಜ್ಜಾಗುತ್ತಿದ್ದಾರೆ, ಸಚಿವ ಸಂಪುಟದಲ್ಲಿ ಯಾರು ಬೇಕು ಎಂಬುದನ್ನ ಪಕ್ಷ ನಿರ್ಧರಿಸಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಹಾರ್ದಿಕ್ ಪಟೇಲ್ ಸೋಮವಾರ ಹೇಳಿದ್ದಾರೆ.
ಬಿಜೆಪಿ ಪರ ಮೊದಲ ಚುನಾವಣೆಯಲ್ಲಿ 50,000 ಕ್ಕೂ ಹೆಚ್ಚು ಮತಗಳಿಂದ ವಿರಾಮ್‌ಗ್ರಾಮ್ ವಿಧಾನಸಭಾ ಕ್ಷೇತ್ರವನ್ನ ಗೆದ್ದ ಹಾರ್ದಿಕ್ ಪಟೇಲ್, ತಾನು ಅತ್ಯಂತ ಕಿರಿಯ ಶಾಸಕನಾಗಿದ್ದು, ಪಕ್ಷವು ತನಗೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.
“ನಾನು ಅತ್ಯಂತ ಕಿರಿಯ ಶಾಸಕ. ಪಕ್ಷಕ್ಕಾಗಿ ಕೆಲಸ ಮಾಡುವುದರಲ್ಲಿ ಮಾತ್ರ ನನಗೆ ನಂಬಿಕೆ ಇದೆ. ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಬಿಜೆಪಿ ನಿರ್ಧರಿಸುತ್ತದೆ. ಪಕ್ಷವು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ” ಎಂದು ಪಾಟಿದಾರ್ ನಾಯಕ ಹೇಳಿದ್ದಾರೆ.
ಉದ್ಯೋಗದ ಮೀಸಲಾತಿಗಾಗಿ ಪಾಟಿದಾರ್ ಸಮುದಾಯದ ಆಂದೋಲನಯದ ನಂತರ ಹಾರ್ದಿಕ್ ಪಟೇಲ್ ಮುನ್ನಲೆಗೆ ಬಂದಿದ್ದರು. 2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಂತರ ಆ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಮೂಡಿ ಬಿಜೆಪಿ ಗೆ ಸೇರ್ಪಡೆಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಗಾಂಧಿನಗರದಲ್ಲಿ ಸತತ ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಟೇಲ್ ಜೊತೆಗೆ ಕೆಲವು ಹೊಸ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
Gujarat cabinet: I am the youngest MLA, the ministerial position will be decided by the party – Hardik Patel








