Gujarat election : ಗುಜರಾತ್ – ಮೊದಲ ಹಂತದ ಮತದಾನ ಆರಂಭ
ಇಂದು ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಚುನಾವಣಾ ಕಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ 89-89 ಅಭ್ಯರ್ಥಿಗಳು ಮತ್ತು ಎಎಪಿಯ 88 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಒಂಬತ್ತು ಮಹಿಳಾ ಅಭ್ಯರ್ಥಿಗಳು, ಕಾಂಗ್ರೆಸ್ ನ 6 ಮತ್ತು ಎಎಪಿಯ ಐದು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಾರಿ ಎಎಪಿ ಮೂರನೇ ಪಕ್ಷವಾಗಿ ಈ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಗುಜರಾತ್ ನಲ್ಲಿ ತ್ರಿಕೋನ ಹೋರಾಟ ಏರ್ಪಟ್ಟಿದೆ. ಪಂಜಾಬ್ ಬಳಿಕ ಗುಜರಾತ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಎಪಿ ಹವಣಿಸುತ್ತಿದೆ.
ಸೌರಾಷ್ಟ್ರ-ಕಚ್ ಮತ್ತು ರಾಜ್ಯದ ದಕ್ಷಿಣ ಭಾಗಗಳ 19 ಜಿಲ್ಲೆಗಳಲ್ಲಿನ 89 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Gujarat election: Gujarat – First phase of voting begins