ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಡೆಲ್ಲಿ ವಿರುದ್ಧ ಹೀನಾಯ ದಾಖಲೆಯೊಂದನ್ನು ಬರೆದಿದೆ. ಈ ಮೂಲಕ ಡೆಲ್ಲಿ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಡೆಲ್ಲಿ ಬೌಲರ್ ಗಳ ದಾಳಿಗೆ ತುತ್ತಾಗೆ ಕೇವಲ 89 ರನ್ ಗಳಿಗೆ ಆಲ್ ಔಟ್ ಆಗಿದೆ. ರಶೀದ್ ಖಾನ್ 31 ರನ್ ಕಲೆ ಹಾಕಿದ್ದನ್ನು ಬಿಟ್ಟರೆ ಉಳಿದ ಆಟಗಾರರು ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಸತತ ಸೋಲು ಕಂಡು ಜಯದ ಹಾದಿಗೆ ಮರಳಿರುವ ಡೆಲ್ಲಿ, ಟೈಟಾನ್ಸ್ ತಂಡದ ವಿರುದ್ಧ ಅಪರೂಪದ ಹಾಗೂ ಭರ್ಜರಿ ದಾಖಲೆ ಬರೆದಿದೆ.
ಗುಜರಾತ್ ನ್ನು 89 ರನ್ ಗಳಿಗೆ ಆಲೌಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಐಪಿಎಲ್ ಇತಿಹಾಸದಲ್ಲಿ ಶುಭ್ಮನ್ ಗಿಲ್ ಪಡೆಯನ್ನು ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಹಿಂದೆ ಯಾವುದೇ ತಂಡವೂ ಗುಜರಾತ್ ನ್ನು 100 ರನ್ ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿರಲಿಲ್ಲ. ಸದ್ಯ ಈ ದಾಖಲೆಯನ್ನು ಡೆಲ್ಲಿ ಬರೆದಿದೆ. ಈ ಹಿಂದೆ ಡೆಲ್ಲಿ ತಂಡವು ಮುಂಬೈ ತಂಡವನ್ನು 92 ರನ್ ಗಳಿಗೆ ಆಲೌಟ್ ಮಾಡಿತ್ತು. ಡೆಲ್ಲಿ ಪರ ಮುಖೇಶ್ ಕುಮಾರ್ 3, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು ಗುಜರಾತ್ ಗೆ ಶಾಕ್ ಕೊಟ್ಟಿದ್ದಾರೆ.